ಅಕ್ರಮ ಸಂಬಂಧಕ್ಕೆ ಬೇಸತ್ತು ಪ್ರೀತಿಯ ನಾಯಿಯನ್ನೇ ಮನೆಯಿಂದ ಹೊರಹಾಕಿದ ಒಡತಿ!

ಲೈಂಗಿಕ ಕ್ರಿಯೆಯು ಪ್ರಾಕೃತಿಕ ಸಹಜ ಕ್ರಿಯೆಯಾಗಿದ್ದು ಅದನ್ನು ನಡೆಸುವುದೇ ತಪ್ಪಾಯ್ತಾ. ಹೌದು ಮಹಿಳೆಯೊಬ್ಬರು ಅಕ್ರಮ ಸಂಬಂಧಕ್ಕೆ ಬೇಸತ್ತು ಪ್ರೀತಿಯ...

Published: 24th July 2019 12:00 PM  |   Last Updated: 24th July 2019 04:03 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ತಿರುವನಂತಪುರ: ಲೈಂಗಿಕ ಕ್ರಿಯೆಯು ಪ್ರಾಕೃತಿಕ ಸಹಜ ಕ್ರಿಯೆಯಾಗಿದ್ದು ಅದನ್ನು ನಡೆಸುವುದೇ ತಪ್ಪಾಯ್ತಾ. ಹೌದು ಮಹಿಳೆಯೊಬ್ಬರು ಅಕ್ರಮ ಸಂಬಂಧಕ್ಕೆ ಬೇಸತ್ತು ಪ್ರೀತಿಯ ನಾಯಿಯನ್ನೇ ಮನೆಯಿಂದ ಹೊರಹಾಕಿರುವ ಘಟನೆ ನಡೆದಿದೆ. 

ಕೇರಳದ ತಿರುವನಂತಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಪೊಮೆರೇನಿಯನ್ ನಾಯಿಯೊಂದು ಮಳೆಯಲ್ಲಿ ನೆನೆಯುತ್ತಾ ನಿಂತಿದ್ದನ್ನು ಕಂಡ ಪ್ರಾಣಿದಯಾ ಸಂಘದ ಕಾರ್ಯದರ್ಶಿ ಲತಾ ಅವರು ನಾಯಿಯನ್ನು ರಕ್ಷಿಸಿದ್ದಾರೆ. ಇನ್ನು ನಾಯಿಯ ಕುತ್ತಿಗೆಯಲ್ಲಿ ಪತ್ರವೊಂದನ್ನು ತೂಗು ಹಾಕಲಾಗಿತ್ತು. 

ಆ ಪತ್ರವನ್ನು ಬಿಡಿಸಿ ನೋಡಿದಾಗ ಅದರಲ್ಲಿ ಈ ನಾಯಿ ಅಕ್ರಮ ಸಂಬಂಧ ಹೊಂದಿತ್ತು. ಹೀಗಾಗಿ ನಾನು ಇದನ್ನು ಮನೆಯಿಂದ ಹೊರ ಹಾಕಿದ್ದೇನೆ. ಈ ಶ್ವಾನ ಬ್ರೆಡ್ ತಿನ್ನುತ್ತದೆ. ಹಾಲು ಕುಡಿಯುತ್ತದೆ. ಇದಕ್ಕೆ ಮೂರು ವರ್ಷವಾಗಿದ್ದು ಯಾವುದೋ ರೋಗವಿಲ್ಲ. ಇದು ಅತಿಯಾಗಿ ಬೊಗಳುತ್ತದೆ ಅದೊಂದೇ ಸಮಸ್ಯೆ ಎಂದು ಬರೆಯಲಾಗಿತ್ತು. 

ಇದಕ್ಕೆ ಲತಾ ಆಶ್ಚರ್ಯ ವ್ಯಕ್ತಪಡಿಸಿದ್ದು ಆರು ತಿಂಗಳಿಗೊಮ್ಮೆ ಗಂಡು-ಹೆಣ್ಣು ಶ್ವಾನಗಳು ಸೇರುತ್ತವೆ. ಈ ವೇಳೆ ಸಹಜವಾಗಿಯೇ ಹೆಣ್ಣು ನಾಯಿಗಳು ಗಂಡು ಶ್ವಾನವನ್ನು ಬಯಸುತ್ತವೆ. ಇದಕ್ಕೆ ಅಪರಾಧ ಎಂದು ಭಾವಿಸಿದ್ದು ನಿಜಕ್ಕೂ ದುರಾದೃಷ್ಟ ಎಂದು ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp