ದೇಶದಲ್ಲಿ 23 ಸ್ವಘೋಷಿತ ನಕಲಿ ವಿಶ್ವವಿದ್ಯಾಲಯಗಳು: ಯುಜಿಸಿ

ಕೇಂದ್ರ ಅನುದಾನ ಆಯೋಗ(ಯುಜಿಸಿ) ದೇಶದಲ್ಲಿ 23 ಸ್ವಘೋಷಿತ ಅನಧಿಕೃತ ವಿಶ್ವವಿದ್ಯಾಲಯಗಳ ...
ಯುಜಿಸಿ
ಯುಜಿಸಿ
ನವದೆಹಲಿ: ಕೇಂದ್ರ ಅನುದಾನ ಆಯೋಗ(ಯುಜಿಸಿ) ದೇಶದಲ್ಲಿ 23 ಸ್ವಘೋಷಿತ ಅನಧಿಕೃತ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅವುಗಳಲ್ಲಿ 8 ವಿಶ್ವವಿದ್ಯಾಲಯಗಳು ಉತ್ತರ ಪ್ರದೇಶದಲ್ಲಿವೆ. ಈ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯದಂತೆ ಉನ್ನತ ಶಿಕ್ಷಣ ಪ್ರಾಧಿಕಾರ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.
ಯುಜಿಸಿ ಕಾಯ್ದೆಗೆ ವಿರುದ್ಧವಾಗಿ ದೇಶದ ವಿವಿಧ ಭಾಗಗಳಲ್ಲಿ ಅನಧಿಕೃತ, ಸ್ವಘೋಷಿತ 23 ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿದೆ, ವಿದ್ಯಾರ್ಥಿಗಳು ಮತ್ತು ಜನರು ಎಚ್ಚರವಾಗಿರಬೇಕು ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ತಿಳಿಸಿದ್ದಾರೆ.
ಎಂಟು ವಿಶ್ವವಿದ್ಯಾಲಯಗಳು ಉತ್ತರ ಪ್ರದೇಶದಲ್ಲಿ, ದೆಹಲಿಯಲ್ಲಿ ಏಳು, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಪುದುಚೆರಿಯಲ್ಲಿ ಒಂದೊಂದು ನಕಲಿ ವಿಶ್ವವಿದ್ಯಾಲಯಗಳಿವೆ.
ಉತ್ತರ ಪ್ರದೇಶದ (ವಾರಣಾಸಿ), ಮಹಿಲ ಗ್ರಾಮ ವಿದ್ಯಾಪಿತ್ / ವಿಶ್ವವಿದ್ಯಾಲಯ (ಪ್ರಯಾಗರಾಜ್), ಗಾಂಧಿ ಹಿಂದಿ ವಿದ್ಯಾಪೀಠ (ವಾರಣಾಸಿ), ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ (ಕಾನ್ಪುರ), ನೇತಾಜಿ ಸುಭಾಶ್ ಚಂದ್ರ ಬೋಸ್ ಮುಕ್ತ ವಿ.ವಿ(ಆಲಿಗಢ), ಉತ್ತರ ಪ್ರದೇಶ ವಿಶ್ವವಿದ್ಯಾಲಯ(ಮಥುರ), ಮಹಾರಾಣ ಪ್ರತಾಪ್ ಶಿಕ್ಷ ನಿಕೇತನ್ ವಿಶ್ವವಿದ್ಯಾಲಯ (ಪ್ರತಾಪಢ), ಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷತ್ (ನೋಯ್ಡಾ)ಗಳಾಗಿವೆ. 
ದೆಹಲಿಯಲ್ಲಿ ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ವೊಕೇಶನಲ್ ಯೂನಿವರ್ಸಿಟಿ, ಎಡಿಆರ್-ಸೆಂಟ್ರಿಕ್ ಜ್ಯುರಿಡಿಕಲ್ ಯೂನಿವರ್ಸಿಟಿ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ಆದ್ಯಾತ್ಮಿಕ ವಿಶ್ವವಿದ್ಯಾಲಯ(ಧಾರ್ಮಿಕ ವಿ.ವಿ) ಮತ್ತು ಸ್ವ ಉದ್ಯೋಗಕ್ಕೆ ವಿಶ್ವಕರ್ಮ ಮುಕ್ತ ವಿಶ್ವವಿದ್ಯಾಲಯ ನಕಲಿ ವಿ.ವಿಗಳೆಂದು ಘೋಷಿಸಲಾಗಿದೆ.
ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ (ಕರ್ನಾಟಕ), ಸೇಂಟ್ ಜಾನ್ಸ್ ವಿಶ್ವವಿದ್ಯಾಲಯ (ಕೇರಳ), ರಾಜ ಅರೇಬಿಕ್ ವಿಶ್ವವಿದ್ಯಾಲಯ (ಮಹಾರಾಷ್ಟ್ರ) ಮತ್ತು ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಪುದುಚೇರಿ) ಸಹ ಈ ಪಟ್ಟಿಯಲ್ಲಿ ಸೇರಿದೆ.
ಪಶ್ಚಿಮ ಬಂಗಾಳ ಮತ್ತು ಒಡಿಶಾಗಳಲ್ಲಿ ತಲಾ ಎರಡು ನಕಲಿ ವಿವಿಗಳಿವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್, ನಭಭರತ್ ಶಿಕ್ಷಾ ಪರಿಷತ್ ಮತ್ತು ಉತ್ತರ ಒರಿಸ್ಸಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಗಳು ಆಗಿವೆ.
ಲಕ್ನೋದ ಭಾರತೀಯ ಶಿಕ್ಷ ಪರಿಷದ್ ವಿಚಾರಣೆ ಹಂತದಲ್ಲಿದೆ ಎಂದು ಜೈನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com