ಗುಮ್ನಾನಿ ಬಾಬಾ ಅವರೇ ನೇತಾಜಿ ಎಂಬುದು ನಿಜವೆ? ನ್ಯಾಯಾಧೀಶರ ವರದಿಯಿಂದ ರಹಸ್ಯ ಬಹಿರಂಗ

ನಿಗೂಢ ವ್ಯಕ್ತಿಯಾಗಿದ್ದ ಗುಮ್ನಾನಿ ಬಾಬಾ ಅವರ ರಹಸ್ಯವನ್ನು ಬೇಧಿಸುವ ಸಲುವಾಗಿ ರಚನೆಯಾಗಿದ್ದ ನ್ಯಾ. ವಿಷ್ಣು ಸಹಾಯ್ ಅವರ ನೇತೃತ್ವದ ಆಯೋಗದ ವರದಿಯನ್ನು ಉತ್ತರ ಪ್ರದೇಶ ಸಚಿವ ಸಂಪುಟದಲ್ಲಿ ಇಂದು ಮಂಡಿಸಲಾಗಿದೆ.

Published: 24th July 2019 12:00 PM  |   Last Updated: 24th July 2019 04:55 AM   |  A+A-


ಗುಮ್ನಾನಿ ಬಾಬಾ ,ನೇತಾಜಿ

Posted By : RHN RHN
Source : The New Indian Express
ಲಖನೌ: ನಿಗೂಢ ವ್ಯಕ್ತಿಯಾಗಿದ್ದ ಗುಮ್ನಾನಿ ಬಾಬಾ ಅವರ ರಹಸ್ಯವನ್ನು ಬೇಧಿಸುವ ಸಲುವಾಗಿ ರಚನೆಯಾಗಿದ್ದ ನ್ಯಾ. ವಿಷ್ಣು ಸಹಾಯ್ ಅವರ ನೇತೃತ್ವದ ಆಯೋಗದ ವರದಿಯನ್ನು ಉತ್ತರ ಪ್ರದೇಶ ಸಚಿವ ಸಂಪುಟದಲ್ಲಿ ಇಂದು ಮಂಡಿಸಲಾಗಿದೆ .1985 ರಲ್ಲಿ ತಾವು ಕೊನೆಯುಸಿರೆಳೆವವರೆಗೆ ಫೈಜಾಬಾದ್‌ನಲ್ಲಿ ವಾಸಿಸುತ್ತಿದ್ದ ಗುಮ್ನಾಮಿ ಬಾಬಾ ಅಲಿಯಾಸ್ ಭಗವಾಂಜಿ ನಿಜವಾಗಿ ನೇತಾಜಿ ಸುಭಾಸ್ ಚಂದ್ರ ಬೋಸ್ ಆಗಿದ್ದರೆ? ಎನ್ನುವ ಕುರಿತಂತೆ ಈ ವರದಿ ಸ್ಪಷ್ಟನೆ ನಿಡಲಿದೆ. ಈ ವರದಿಯನ್ನು ಸರ್ಕಾರವು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಿದೆ.

ನ್ಯಾಯಮೂರ್ತಿ ವಿಷ್ಣು ಸಹಾಯ್ ನೇತೃತ್ವದ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸುವ ಪ್ರಸ್ತಾಪಕ್ಕೆ ಯೋಗಿ ಆದಿತ್ಯನಾಥ್ ನೇತೃತ್ವದ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.

ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ, ನಡೆಯುತ್ತಿರುವ ಮಾನ್ಸೂನ್ ಅಧಿವೇಶನ ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿರುವ ಕಾರಣ ವರದಿಯನ್ನು ಮುಂದಿನ ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಹೇಗಾದರೂ, ವರದಿಯು ರಹಸ್ಯವನ್ನು ಬಿಚ್ಚಿಡುತ್ತದೆಯೇ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಿಲ್ಲ. ಸಹಾಯ್ ಅವರ ವರದಿ ಬಹಿರಂಗಪಡಿಸಿದ ಬಳಿಕವೇ ಅದು ತಿಳಿಯಲಿದೆ ಎಂದಿದ್ದಾರೆ.

ಆದಾಗ್ಯೂ, ತನಿಖಾ ವರದಿಯ ಕುರಿತು ತಿಳಿದಿರುವ ನಂಬಲರ್ಹ ಮೂಲಗಳು ಹೇಳಿದಂತೆ ಸಾರ್ವಜನಿಕರ ನಂಬಿಕೆಯಾಗಿರುವಂತೆ ಗುಮ್ನಾಮಿ ಬಾಬಾ ನಿಜಕ್ಕೂ ನೇತಾಜಿ ಸುಭಾಸ್ ಚಂದ್ರ ಬೋಸ್  ಎನ್ನುವುದನ್ನು ವರದಿ ಒಪ್ಪಿಕೊಂಡಿಲ್ಲ.

ಸಂಶೋಧನೆಗಳು ಬಾಬಾವನ್ನು ನೇತಾಜಿಯೊಂದಿಗೆ ಹೋಲಿಸಿವೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನೇತಾಜಿಯಂತೆ ಗುಮ್ನಾಮಿ ಬಾಬಾ ಅವರು ಇಂಗ್ಲಿಷ್, ಹಿಂದಿ ಮತ್ತು ಬಾಂಗ್ಲಾ ಸೇರಿದಂತೆ ಮೂರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು ಎಂದು ವರದಿ ಹೇಳುತ್ತದೆ. ಮೂರು ಭಾಷೆಗಳಲ್ಲಿನ ಸಾಹಿತ್ಯ ಮತ್ತು ನೇತಾಜಿಯ ನೆಚ್ಚಿನ ಲೇಖಕರ ಪುಸ್ತಕಗಳು ಗುಮ್ನಾಮಿ ಬಾಬಾ ಅವರು ವಾಸಿಸುತ್ತಿದ್ದ ಸ್ಥಳದಲ್ಲಿ ಕಂಡುಬಂದಿವೆ. ಬಾಬಾ ಅತ್ಯಂತ ಪೂಜ್ಯ ವ್ಯಕ್ತಿಯಾಗಿದ್ದು ಹಲವಾರು ಜನರಿಂದ ಸುತ್ತುವರಿದಿರುತ್ತಿದ್ದರು.

ಗುಮ್ನಾಮಿ ಬಾಬಾ ಅವರು ಸೆಪ್ಟೆಂಬರ್ 16, 1985 ರಂದು ನಿಧನರಾದರು. ಅವರ ಕೊನೆಯ ವಿಧಿಗಳನ್ನು ಸೆಪ್ಟೆಂಬರ್ 18, 1985ರಂದು ನಡೆಸಲಾಯಿತು.

ಜುಲೈ 4, 2016ರಂದು ನ್ಯಾಯಮೂರ್ತಿ ಸಹಾಯ್ ಅವರ ಆಯೋಗ ಸ್ಥಾಪನೆಯಾಗಿದೆ. ಅದು 347 ಪುಟಗಳ ವರದಿಯನ್ನು 2017ರ ಸೆಪ್ಟೆಂಬರ್ 19ರಂದು ರಾಜ್ಯಪಾಲ ರಾಮ್ ನಾಯಕ್ ಅವರಿಗೆ ಸಲ್ಲಿಸಿತ್ತು. 2013ರ ಜನವರಿ 31 ರಂದು ಅಲಹಾಬಾದ್ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಆಯೋಗವನ್ನು ಸ್ಥಾಪಿಸಲಾಗಿದೆ. ಗುಮ್ನಾನಿ ಬಾಬಾ ಅವರ ರಹಸ್ಯ ಬೇಧಿಸುವ ಸಮಯದಲ್ಲಿ ಆಯೋಗವು ಒಟ್ಟು 35 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ.ಅಲ್ಲದೆ ಯೋಗದ ಮುಂದೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದವರು 10 ಅಫಿಡವಿಟ್ ಗಳನ್ನು ಸಲ್ಲಿಸಿದ್ದಾರೆ.

ಬಾಬಾ ಮತ್ತು ನೇತಾಜಿ ನಡುವೆ ಸಮಾನ ಅಂಶಗಳತ್ತ ಗಮನಿಸಿದರೆ ಬಾಬಾ ಅವರು ನೇತಾಜಿಯಂತೆಯೇ ಸಂಗೀತ ಮತ್ತು ಸಿಗಾರ್‌ಗಳ ಬಗ್ಗೆ ಒಲವು ಹೊಂದಿದ್ದರು ಎಂದು ವರದಿ ಹೇಳುತ್ತದೆ. ಆಯೋಗದ ಮುಂದೆ ವಿಚಾರಣೆಗೆ ಹಾಜರಾದವರಲ್ಲಿ ಹೆಚ್ಚಿನವರು ಗುಮ್ನಾಮಿ ಬಾಬಾ ಬೋಸ್ ಆಗಿರಬಹುದು ಎಂದು ಹೇಳಿದ್ದಾರೆ.  ಅನೇಕ ಸಾಕ್ಷಿಗಳು ತಮ್ಮ ಸಾಕ್ಷ್ಯವನ್ನು ವೈಯಕ್ತಿಕ ಅವಲೋಕನಗಳ ಮೇಲೆ ಆಧರಿಸಿದ್ದಾರೆಂದು ಹೇಳೀದ್ದಾರೆ.ಅದಲ್ಲದೆ ಬೋಸ್‌ಗೆ ಸಂಬಂಧಿಸಿದ ಲೇಖನಗಳು ಗುಜ್ನಾಮಿ ಬಾಬಾ ತಂಗಿದ್ದ ಫೈಜಾಬಾದ್‌ನ ರಾಮ್ ಭವನದಿಂದ ವಶಕ್ಕೆ ಪಡೆಯಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp