ಚಂಡೀಗಢ: 2 ಬಾಳೆಹಣ್ಣಿಗೆ 442 ರೂ. ಬಿಲ್ ಮಾಡಿದ ಸ್ಟಾರ್​ ಹೋಟೆಲ್, ತನಿಖೆಗೆ ಆದೇಶ

ಚಂಡೀಗಢದ ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದ ಬಾಲಿವುಡ್ ನಟ ರಾಹುಲ್ ಬೋಸ್ ಅವರು ಎರಡೇ ಎರಡು ಬಾಳೆಹಣ್ಣಿಗಾಗಿ ಬರೋಬ್ಬರಿ 442 ರೂಪಾಯಿ...

Published: 25th July 2019 12:00 PM  |   Last Updated: 25th July 2019 03:49 AM   |  A+A-


Inquiry after hotel charges Rs 442 for bananas

ಬಾಳೆಹಣ್ಣು, ಬಿಲ್

Posted By : LSB LSB
Source : Online Desk
ಚಂಡೀಗಢ: ಚಂಡೀಗಢದ ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದ ಬಾಲಿವುಡ್ ನಟ ರಾಹುಲ್ ಬೋಸ್ ಅವರು ಎರಡೇ ಎರಡು ಬಾಳೆಹಣ್ಣಿಗಾಗಿ ಬರೋಬ್ಬರಿ 442 ರೂಪಾಯಿ ತೆತ್ತಿದ್ದು, ಈ ಕುರಿತು ಸ್ಥಳೀಯ ಆಡಳಿತ ತನಿಖೆಗೆ ಆದೇಶಿಸಿದೆ.

ಅರೇ ಎರಡೇ ಬಾಳೆಹಣ್ಣಿಗೆ 442 ರೂಪಾಯಿಯೇ ಎಂದು ಹುಬ್ಬೇರಿಸಬೇಡಿ. ಇದು ವಿದೇಶದಿಂದ ಆಮದು ಮಾಡಿಕೊಂಡಿರುವ ಹಣ್ಣಲ್ಲ. ಬಾಲಿವುಡ್ ನಟ ಪಡೆದ ಕೇವಲ ಎರಡು ದೇಶಿ ಬಾಳೆ ಹಣ್ಣಿಗೆ ಇಲ್ಲಿನ ಹೋಟೆಲ್ ಜೆಡಬ್ಲ್ಯೂ ಮ್ಯಾರಿಯಟ್ ಬರೋಬ್ಬರಿ 442 ರೂಪಾಯಿ ಬಿಲ್ ಮಾಡಿದೆ.

ಈ ಕುರಿತು ಟ್ವೀಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ನಟ ರಾಹುಲ್ ಬೋಸ್ ಅವರು, ನೀವಿದನ್ನು ನಂಬಲೇಬೇಕು. ಯಾರು ಹೇಳಿದ್ದು ಹಣ್ಣುಗಳು ಆರೋಗ್ಯಕ್ಕೆ ಹಾನಿಕರವಲ್ಲವೆಂದು? ಎಂದು ಹೊಟೇಲ್ ನ್ನು ಟ್ಯಾಗ್ ಮಾಡಿ ವ್ಯಂಗ್ಯವಾಡಿದ್ದಾರೆ.

ಜೆಡಬ್ಲ್ಯೂ ಮ್ಯಾರಿಯಟ್ ಕೇವಲ ಎರಡು ಬಾಳೆ ಹಣ್ಣಿಗೆ 375 ರೂಪಾಯಿ ಹಾಗೂ ಶೇ.18 ರಷ್ಟು ಜಿಎಸ್ ಟಿ ಸೇರಿ 442 ರೂಪಾಯಿ ಬಿಲ್ ಮಾಡಿದೆ ಎಂದು ನಟ ಹೇಳಿದ್ದಾರೆ. ಅಲ್ಲದೆ ಈ ವಿಡಿಯೋದಲ್ಲಿ ಬಾಳೆಹಣ್ಣಿನ ಚಿತ್ರ ತೋರಿಸಿ, ಬಿಲ್ ಪ್ರತಿಯನ್ನೂ ತೋರಿಸಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅಬಕಾರಿ ಉಪ ಆಯುಕ್ತ ಮಂದಿಪ್ ಸಿಂಗ್ ಬ್ರಾರ್ ಅವರು, ಹೋಟೆಲ್ ವಿರುದ್ಧ ತನಿಖೆಗೆ ಆದೇಶಿಸಿಲಾಗಿದೆ ಎಂದು ತಿಳಿಸಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp