ಸಂಸತ್
ಸಂಸತ್

ಆಗಸ್ಟ್ 7ರವರೆಗೂ ಸಂಸತ್ ಬಜೆಟ್ ಅಧಿವೇಶನ ವಿಸ್ತರಣೆ ಸಾಧ್ಯತೆ

ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನ ಆಗಸ್ಟ್ 7ರವರೆಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ. ನಿಗದಿಪಡಿಸಲಾಗಿದ್ದ ಅವಧಿಗಿಂತಲೂ ಒಂದು ವಾರಗಳ ಕಾಲ ಅಧಿವೇಶನವನ್ನು ವಿಸ್ತರಿಸಲಾಗುತ್ತಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನ ಆಗಸ್ಟ್ 7ರವರೆಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ.  ನಿಗದಿಪಡಿಸಲಾಗಿದ್ದ ಅವಧಿಗಿಂತಲೂ ಒಂದು ವಾರಗಳ ಕಾಲ ಅಧಿವೇಶನವನ್ನು ವಿಸ್ತರಿಸಲಾಗುತ್ತಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಸಂಸತ್ತಿನ ನೂತನ ಸದಸ್ಯರು ಜೂನ್ 17 ರಂದು ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಆರಂಭವಾದ 17ನೇ ಲೋಕಸಭೆಯ ಬಜೆಟ್ ಅಧಿವೇಶನ ಜುಲೈ 26 ರಂದು ಅಂತ್ಯಗೊಳ್ಳಬೇಕಿತ್ತು.ಆದರೆ, ಶೇ, 80 ರಷ್ಟು ವಿಧೇಯಕಗಳು ಇತ್ಯರ್ಥ ಗೊಳ್ಳದೆ ಬಾಕಿ ಇರುವುದರಿಂದ ಅಧಿವೇಶನದ ಅವಧಿಯನ್ನು ಆಗಸ್ಟ್ 7ರವರೆಗೂ ವಿಸ್ತರಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಸುಮಾರು ಒಂದುವರೆ ವರ್ಷಗಳಿಂದಲೂ ಹಲವು ವಿಧೇಯಕಗಳು ಅಂಗೀಕಾರವಾಗದೆ ಹಾಗೆಯೇ ಉಳಿದಿದ್ದು, ಅವುಗಳನ್ನು ಈಗ ತೆಗೆದುಕೊಳ್ಳಲಾಗಿದೆ . ಈ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನವನ್ನು ವಿಸ್ತರಣೆ ಮಾಡಲು ಸರ್ಕಾರ ಚಿಂತಿಸಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ನಿನ್ನೆ  ಹೇಳಿಕೆ ನೀಡಿದ್ದರು.
ಮೊನ್ನೆ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲೂ ಈ ವಿಷಯವನ್ನು ಗೃಹ ಸಚಿವ ಅಮಿತ್ ಶಾ  ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com