ಅಮರನಾಥ ಯಾತ್ರೆ: ಜಮ್ಮುವಿನಿಂದ ಹೊರಟ ಸುಮಾರು 4 ಸಾವಿರ ಯಾತ್ರಾರ್ಥಿಗಳ ಹೊಸ ತಂಡ

ಸುಮಾರು ಸಾವಿರ ಯಾತ್ರಾರ್ಥಿಗಳ ಹೊಸ ತಂಡವೊಂದು ಶಿವನ ಗುಹಾಂತರ ದೇಗುಲಕ್ಕೆ ಪ್ರಾರ್ಥನೆ ಸಲ್ಲಿಸಲು ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರನಾಥ ಯಾತ್ರೆ
ಅಮರನಾಥ ಯಾತ್ರೆ
ಜಮ್ಮು-ಕಾಶ್ಮೀರ:  ಹಮಾಮಾನ ವೈಫರೀತ್ಯದ ಹಿನ್ನೆಲೆಯಲ್ಲಿ ಜಮ್ಮುವಿನಿಂದ ಕಾಶ್ಮೀರಕ್ಕೆ ತೆರಳುತ್ತಿದ್ದ ಅಮರನಾಥ ಯಾತ್ರೆಯನ್ನು ನಿನ್ನೆ ರದ್ದುಪಡಿಸಲಾಗಿತ್ತು.ಆದಾಗ್ಯೂ, ಇಂದು  ಇಲ್ಲಿನ ವಾಯುನೆಲೆಯಿಂದ ಸುಮಾರು ಸಾವಿರ ಯಾತ್ರಾರ್ಥಿಗಳ ಹೊಸ ತಂಡವೊಂದು ಶಿವನ ಗುಹಾಂತರ ದೇಗುಲಕ್ಕೆ ಪ್ರಾರ್ಥನೆ ಸಲ್ಲಿಸಲು ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಜಮ್ಮು ನಗರಿಂದ ಕಾಶ್ಮೀರದ ಬಾಲ್ಟಾಲ್ ಮಾರ್ಗದಲ್ಲಿ ಅಮರನಾಥ ಯಾತ್ರೆಯನ್ನು ಶುಕ್ರವಾರ ರದ್ದುಗೊಳಿಸಲಾಗಿತ್ತು. ಆದಾಗ್ಯೂ, ಮಳೆಯ ನಡುವೆಯೂ 17 ಮಕ್ಕಳು, 785 ಮಹಿಳೆಯರು ಹಾಗೂ 240 ಸಾಧುಗಳನ್ನೊಳಗೊಂಡ 25 ನೇ ತಂಡ ಬಾಗ್ ವಾಟಿ ನಗರದ ಬೇಸ್ ಕ್ಯಾಂಪ್ ನಿಂದ  165 ವಾಹನಗಳಲ್ಲಿ ಬಿಗಿ ಬಂಧೋಬಸ್ತ್ ನಲ್ಲಿ ಅಮರಯಾತ್ರೆ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ನಾಳೆಯಿಂದ ಪಾಲ್ಗಾಮ್ ಹಾಗೂ ಬಲ್ಟಾಲ್ ಮೂಲಕವೂ ಯಾತ್ರಾರ್ಥಿಗಳು ತೆರಳುವ ಸಾಧ್ಯತೆ ಇದೆ. 
ಈ ಮಧ್ಯೆ  ಪಾಲ್ಗಾಮ್ ಬೇಸ್ ಕ್ಯಾಂಪಿನಿಂದ 2318 ಯಾತ್ರಾರ್ಥಿಗಳು ಪ್ರಯಾಣ ಬೆಳೆಸಿದರೆ, ಉಳಿದ 1608 ಪ್ರಯಾಣಿಕರು ಬಾಲ್ಟಾಲ್ ಮಾರ್ಗದ ಮೂಲಕ ಪ್ರಯಾಣ ಬೆಳೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇಬ್ಬರು ಸ್ವಯಂ ಸೇವಕರು ಹಾಗೂ ಇಬ್ಬರು ಭದ್ರತಾ ಸಿಬ್ಬಂದಿಗಳು ಹಾಗೂ ಮೂವರು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಶುಕ್ರವಾರದವರೆಗೂ ಒಟ್ಟಾರೇ, 3 ಲಕ್ಷದ 14 ಸಾವಿರದ 584 ಯಾತ್ರಾರ್ಥಿಗಳು  ಗುಹಾಂತರ ಶಿವ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂಬುದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com