ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾದರಾ ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್ ರಾವ್?!

ಕೆಸಿಆರ್ ನಡೆಯನ್ನು ಊಹಿಸುವುದು ಕಷ್ಟಸಾಧ್ಯ. ಅವರ ರಾಜಕೀಯ ತಂತ್ರಗಳು ಹಲವು ಬಾರಿ ಅಚ್ಚರಿ ಮೂಡಿಸುವಂತಿರುತ್ತದೆ.
ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾದರಾ ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್ ರಾವ್?!
ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾದರಾ ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್ ರಾವ್?!
ಕೆಸಿಆರ್ ನಡೆಯನ್ನು ಊಹಿಸುವುದು ಕಷ್ಟಸಾಧ್ಯ. ಅವರ ರಾಜಕೀಯ ತಂತ್ರಗಳು ಹಲವು ಬಾರಿ ಅಚ್ಚರಿ ಮೂಡಿಸುವಂತಿರುತ್ತದೆ. ಅಂತೆಯೇ ಈ ಬಾರಿ ಕೇಂದ್ರ ಸರ್ಕಾರದ ಆರ್ ಟಿಐ ತಿದ್ದುಪಡಿ ಮಸೂದೆಯ ವಿಷಯದಲ್ಲಿಯೂ ಆಗಿದೆ. 
ಕೇಂದ್ರ ಸರ್ಕಾರದ ಆರ್ ಟಿಐ ತಿದ್ದುಪಡಿ ಮಸೂದೆಯನ್ನು ಪ್ರಾರಂಭದಲ್ಲಿ ವಿರೋಧಿಸುತ್ತಿದ್ದ ಕೆಸಿಆರ್ ಪಕ್ಷದ ಸಂಸದರು ರಾಜ್ಯಸಭೆಯಲ್ಲಿ ಎನ್ ಡಿಎ ಸರ್ಕಾರದ ಮಸೂದೆಯನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದ್ದಾರೆ. 
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಜೊತೆ ಮಾತನಾಡಿದ ನಂತರ ಆರ್ ಟಿಐ ಕಾಯ್ದೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದು ಮನವರಿಕೆ ಆಗಿದೆ ಎಂದು ಟಿಆರ್ ಎಸ್ ನಾಯಕ ಕೇಶವ ರಾವ್ ಹೇಳಿದ್ದಾರೆ. ಟಿಆರ್ ಎಸ್ ನಾಯಕರು ಮಸೂದೆಗೆ ಬೆಂಬಲಿಸಿರುವ ನಡೆಯನ್ನು ಬಿಜೆಪಿಯೊಂದಿಗೆ ಟಿಆರ್ ಎಸ್ ಕೈ ಜೋಡಿಸಲು ಮುಂದಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com