ಉತ್ತರ ಪ್ರದೇಶ: 'ಜೈ ಶ್ರೀರಾಮ್' ಎನ್ನದ ಮುಸ್ಲಿಂ ಯುವಕನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನ!

"ಜೈ ಶ್ರೀ ರಾಮ್" ಎಂದು ಹೇಳಲು ಒಪ್ಪಿಲ್ಲ ಎಂಬ ಕಾರಣಕ್ಕೆ 15 ವರ್ಷದ ಮುಸ್ಲಿಂ ಯುವಕನೊಬ್ಬನನ್ನು ನಾಲ್ವರು ಸೇರಿ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಚಂದೌಲಿಜಿಲ್ಲೆಯಲ್ಲಿ ನಡೆದಿದೆ.

Published: 29th July 2019 12:00 PM  |   Last Updated: 29th July 2019 11:06 AM   |  A+A-


ಸಂಗ್ರಹ ಚಿತ್ರ

Posted By : RHN
Source : The New Indian Express
ಚಂದೌಲಿ(ಉತ್ತರ ಪ್ರದೇಶ): "ಜೈ ಶ್ರೀ ರಾಮ್" ಎಂದು ಹೇಳಲು ಒಪ್ಪಿಲ್ಲ ಎಂಬ ಕಾರಣಕ್ಕೆ  15 ವರ್ಷದ ಮುಸ್ಲಿಂ ಯುವಕನೊಬ್ಬನನ್ನು ನಾಲ್ವರು ಸೇರಿ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಚಂದೌಲಿಜಿಲ್ಲೆಯಲ್ಲಿ ನಡೆದಿದೆ.

ಭಾನುವಾರ ರಾತ್ರಿ ನಡೆದ ಘಟನೆಯಲ್ಲಿ ಬಾಲಕ ಗಂಭೀರ ಗಾಯಗೊಂಡಿದ್ದು  ವಾರಣಾಸಿಯ ಕಬೀರ್ ಚೌರಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಲಕನಿಗೆ ಶೇ. 60ರಷ್ಟು ಸುಟ್ಟ ಗಾಯಗಳಾಗಿದ್ದು ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. "ಜೈ ಶ್ರೀ ರಾಮ್" ಎಂದು ಜಪಿಸಲು ನಿರಾಕರಿಸಿದಾಗ ಮುಸ್ಲಿಂ ಬಾಲಕನಿಗೆ ಬೆಂಕಿ ಹಚ್ಚಲಾಗಿದೆ ಎಂದು ಆಸ್ಪತ್ರೆಯಲ್ಲಿರಿಉವ ಕ್ಯಾಮರಾ ಮುಂದೆ ಯುವಕ ಹೇಳಿದ್ದಾನೆ.

"ನಾನು ಮಧಾರಿ ಸೇತುವೆ ಮೇಲೆ ನಡೆದು ಹೋಗುತ್ತಿದ್ದಾಗ ನಲ್ವರು ನನ್ನನ್ನು ಸುತುವರಿದು ಅಪಹರಿಸಿದ್ದರು. . ಅವರಲ್ಲಿ ಇಬ್ಬರು ನನ್ನ ಕೈಯನ್ನು ಕಟ್ಟಿದರು ಮತ್ತು ಮೂರನೆಯವರು ಸೀಮೆಎಣ್ಣೆ ಸುರಿಯಲಾರಂಭಿಸಿದರು. ನಂತರ ಅವರು ನನಗೆ ಬೆಂಕಿ ಹಚ್ಚಿ ಓಡಿಹೋದರು" ಎಂದು ಯುವಕ ಹೇಳಿದ್ದಾರೆ.

ಇದಕ್ಕೆ ಮುನ್ನ ಆ ನಾಲ್ವರೂ ನನಗೆ  "ಜೈ ಶ್ರೀ ರಾಮ್" ಎಂದು ಹೇಳುವಂತೆ ಒತ್ತಾಯಿಸಿದ್ದರೆಂದೂ ಭಾಲಕ ಹೇಳಿಕೆಯಲ್ಲಿ ವಿವರಿಸಿದ್ದಾನೆ.

ಈ ನಡುವೆ ಪೊಲೀಸರು ಈ ಇಡೀ ಪ್ರಕರಣದ ಕುರಿತಂತೆ ಶಂಕೆ ವ್ಯಕ್ತಪಡಿಸಿದ್ದಾರೆ. ವಾರಣಾಸಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಈ ಘಟನೆ ಬಗೆಗೆ ಯಾವ ಮಾಹಿತಿ ಇಲ್ಲ ಎಂದು ಐಎಎನ್‌ಎಸ್‌ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp