ಅಧಿಕಾವಧಿ ಕೆಲಸ: ಶೀಘ್ರದಲ್ಲಿಯೇ ಸಾಮಾನ್ಯ ವೇತನಕ್ಕಿಂತ ಎರಡು ಪಟ್ಟು ಹೆಚ್ಚಿನ ಸಂಬಳ!

ಕಂಪನಿಗಳು ಉದ್ಯೋಗಿಗಳಿಗೆ ಅಧಿಕಾವಧಿ ಕೆಲಸ ಮಾಡಿಸಿದರೆ ಅವರ ಸಾಮಾನ್ಯ ವೇತನಕ್ಕಿಂತ ಎರಡು ಪಟ್ಟು ಹೆಚ್ಚಿನ ಸಂಬಳವನ್ನು ಪಾವತಿಸಬೇಕಾಗುತ್ತದೆ.ಇದರ ಜೊತೆಗೆ ಅವರಿಂದ ಮುಂಚಿತವಾಗಿ ಒಪ್ಪಿಗೆ ಪಡೆಯಬೇಕಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ:ಕಂಪನಿಗಳು ಉದ್ಯೋಗಿಗಳಿಗೆ ಅಧಿಕಾವಧಿ ಕೆಲಸ ಮಾಡಿಸಿದರೆ ಅವರ ಸಾಮಾನ್ಯ ವೇತನಕ್ಕಿಂತ ಎರಡು ಪಟ್ಟು ಹೆಚ್ಚಿನ ಸಂಬಳವನ್ನು ಪಾವತಿಸಬೇಕಾಗುತ್ತದೆ.
ಇದರ ಜೊತೆಗೆ ಅವರಿಂದ ಮುಂಚಿತವಾಗಿ ಒಪ್ಪಿಗೆ ಪಡೆಯಬೇಕಾಗುತ್ತದೆ. 
ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಲೋಕಸಭೆಯಲ್ಲಿ ಕಳೆದ ವಾರ ಔದ್ಯೋಗಿಕ ಸುರಕ್ಷತೆ ಆರೋಗ್ಯಮತ್ತು ಕೆಲಸದ ಪರಿಸ್ಥಿತಿಗಳು 2019 ಮಸೂದೆಯನ್ನು ಮಂಡಿಸಿದ್ದಾರೆ.  
ಅಧಿಕಾವಧಿ ಕೆಲಸ ಮಾಡಿಸಬೇಕಾದರೆ ಮುಂಚಿತವಾಗಿ ಉದ್ಯೋಗಿಗಳಿಂದ ಒಪ್ಪಿಗೆ ಪಡೆಯಬೇಕು, ಇಲ್ಲವಾದರೆ ಉದ್ಯೋಗದಾತರು ಅಧಿಕಾವಧಿ ಕೆಲಸ ಮಾಡಿಸುವಂತಿಲ್ಲ ಎಂದು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. 
ಕೆಲಸಗಾರನು ಮಾಡಬಹುದಾದ ಅಧಿಕಾವಧಿ ಗಂಟೆಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸುವ ಅಸ್ತಿತ್ವದಲ್ಲಿರುವ ಕಾನೂನಿನ ನಿಬಂಧನೆಯನ್ನು ಸರ್ಕಾರ ರದ್ದುಗೊಳಿಸಿದೆ. ಬದಲಾಗಿ, ಉದ್ಯೋಗಿಗಳ ಮಾಡಬಹುದಾದ ಕೆಲಸದ ಅವಧಿಯನ್ನು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಸೂಚಿಸುತ್ತವೆ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಯಮದಂತೆ  ವಿವಿಧ ವರ್ಗಗಳ ಉದ್ಯೋಗಿಗಳಿಗೆ ಕೆಲಸದ ಅವಧಿಯನ್ನು ನಿಗದಿಪಡಿಸಲಾಗುತ್ತದೆ.ಅಧಿಕಾವಧಿ ಕೆಲಸ ಮಾಡಿಸಿದರೆ ಸಾಮಾನ್ಯ ವೇತನಕ್ಕಿಂತ ಎರಡು ಪಟ್ಟು ಹೆಚ್ಚಿನ ಸಂಬಳ ನೀಡಬೇಕಾಗುತ್ತದೆ.
 ಒಂದು ವೇಳಾ ಮಹಿಳಾ ಕಾರ್ಮಿಕರಿಂದ ಸಂಜೆ 7 ಗಂಟೆ ನಂತರ ಹಾಗೂ ಬೆಳಗ್ಗೆ ಆರು ಗಂಟೆಗೂ ಮುಂಚಿತವಾಗಿ ಕೆಲಸ ಮಾಡಿಸಿಕೊಳ್ಳಬೇಕಾದರೆ ಅವರ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ. ಅಧಿಕಾವಧಿ ಸಂಬಳದಲ್ಲಿ ಮೂಲವೇತನ, ಡಿಎ ಕೂಡಾ ಸೇರಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com