ಕರ್ನಾಟಕ ಬಳಿಕ ಮಹಾರಾಷ್ಟ್ರದಲ್ಲಿ ಆಪರೇಷನ್? ಕಾಂಗ್ರೆಸ್, ಎನ್‌ಸಿಪಿಯ 4 ಶಾಸಕರು ರಾಜೀನಾಮೆ

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾದ ಬೆನ್ನಲ್ಲೇ ನೆರೆಯ ಮಹಾರಾಷ್ಟ್ರದಲ್ಲಿ ಸಹ ಕಾಂಗ್ರೆಸ್ ಹಾಗೂ ಇತರೆ ಪಕ್ಷದ ಶಾಸಕ್ರಿಗೆ ಬಿಜೆಪಿಯತ್ತ ಒಲವು ಹೆಚ್ಚಿದಂತೆ ಕಾಣುತ್ತಿದೆ
ಕಾಂಗ್ರೆಸ್, ಎನ್‌ಸಿಪಿಯ 4  ಶಾಸಕರು ರಾಜೀನಾಮೆ
ಕಾಂಗ್ರೆಸ್, ಎನ್‌ಸಿಪಿಯ 4 ಶಾಸಕರು ರಾಜೀನಾಮೆ
ಮುಂಬೈ: ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾದ ಬೆನ್ನಲ್ಲೇ ನೆರೆಯ ಮಹಾರಾಷ್ಟ್ರದಲ್ಲಿ ಸಹ ಕಾಂಗ್ರೆಸ್ ಹಾಗೂ ಇತರೆ ಪಕ್ಷದ ಶಾಸಕ್ರಿಗೆ ಬಿಜೆಪಿಯತ್ತ ಒಲವು ಹೆಚ್ಚಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ . ಕಾಂಗ್ರೆಸ್ ಹಾಗೂ ಎನ್.ಸಿ.ಪಿ.ಗೆ ಸೇರಿದ ನಾಲ್ವರು ಶಾಸಕರು ಮಂಗಳವಾರ ತಮ್ಮ ವಿಧಾನಸಭೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಶಾಸಕ ಕಾಳಿದಾಸ್ ಕೋಲಾಂಬ್ಕರ್ ಎನ್‌ಸಿಪಿಯ ಶಿವೇಂದ್ರಸಿನ್ಹ ಭೋಸಲೆ, ವೈಭವ್ ಪಿಚಾದ್ ಮತ್ತು ಸಂದೀಪ್ ನಾಯಕ್ ಅವರುಗಳು ಪ್ರತ್ಯೇಕವಾಗಿ ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭೆ ಸ್ಪೀಕರ್ ಅವರಿಉಗೆ ಸಲ್ಲಿಸಿದ್ದಾರೆ.
ಕೋಲಾಂಬ್ಕರ್ ಏಳು ವಧಿಗೆ ವಿಧಾನಸಭೆ ಶಾಸಕರಾಗಿ ಆಯ್ಕೆಯಾಗಿದ್ದರೆ ಬೋಸಲೆ 2014 ರಲ್ಲಿ 47,813 ಮತಗಳಿಂದ ಸತಾರಾ ಕ್ಷೇತ್ರದಿಂದ ಜಯಗಳಿಸಿದ್ದರು.
ರಾಜೀನಾಮೆ ನೀಡಿದ ಈ ನಾಲ್ವರು ಬುಧವಾರ ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೇವಲ ಎರಡು ತಿಂಗಳಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ಬೆಳವಣಿಗೆಗಳು ನಡೆದಿರುವುದು ಗಮನಾರ್ಹ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com