ಗೋಲ್ ಗುಂಬಜ್ ಸೇರಿ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಸಮಯ ವಿಸ್ತರಣೆ: ಪ್ರಧಾನಿ ಶ್ಲಾಘನೆ

ಜಾಗತಿಕ ಗಮನ ಸೆಳೆದಿರುವ ಹತ್ತು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಸಮಯವನ್ನು ವಿಸ್ತರಿಸಿರುವ ಪ್ರವಾಸೋದ್ಯಮ ಸಚಿವಾಲಯದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಗೋಲ್ ಗುಂಬಜ್ ಸೇರಿ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಸಮಯ ವಿಸ್ತರಣೆ: ಪ್ರಧಾನಿ ಶ್ಲಾಘನೆ
ಗೋಲ್ ಗುಂಬಜ್ ಸೇರಿ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಸಮಯ ವಿಸ್ತರಣೆ: ಪ್ರಧಾನಿ ಶ್ಲಾಘನೆ
ನವದೆಹಲಿ: ಜಾಗತಿಕ ಗಮನ ಸೆಳೆದಿರುವ ಹತ್ತು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಸಮಯವನ್ನು ವಿಸ್ತರಿಸಿರುವ ಪ್ರವಾಸೋದ್ಯಮ ಸಚಿವಾಲಯದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಮಯ ಹೆಚ್ಚಿಸಿರುವುದರಿಂದ ಹೆಚ್ಚು ಹೆಚ್ಚು ಜನ ಈ ಸ್ಥಳಗಳಿಗೆ ಭೇಟಿ ನೀಡಲು ಹಾಗೂ ಭಾರತದ ಭವ್ಯ ಇತಿಹಾಸ ಅರಿಯಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. 
ರಾಜ್ಯದ ವಿಜಯಪುರದ ಐತಿಹಾಸಿಕ ಗೋಲ್ ಗುಂಬ ಸೇರಿ ಹತ್ತು ಸ್ಮಾರಕಗಳನ್ನು ಸಾರ್ವಜನಿಕರು ವೀಕ್ಷಿಸಲು ರಾತ್ರಿ 9 ಗಂಟೆ ತನಕ ಸಮಯ ವಿಸ್ತರಿಸಿ ಪ್ರವಾಸೋದ್ಯಮ ಸಚಿವಾಲಯ ನಿನ್ನೆ ಆದೇಶ ಹೊರಡಿಸಿತ್ತು. 
ದೆಹಲಿಯ ಸಫ್ತಾರ್ ಜಂಗ್ ಹಾಗೂ ಹುಮಾಯೂನ್ ಗುಮ್ಮಟಗಳು, ಒಡಿಶಾದ ರಾಜ ರಾಣಿ ದೇವಾಲು ಸಂಕೀರ್ಣ, ಮಧ್ಯ ಪ್ರದೇಶದ ದುಲಾದೇವ್ ಮಂದಿರ, ಹರಿಯಾಣದ ಶೇಕ್ ಚಿಲ್ಲಿ ಗುಮ್ಮಟ, ಮಹಾರಾಷ್ಟ್ರದ ಮಾರ್ಕಾಂಡ ದೇವಾಲಯ ಸಮೂಹ, ಗುಜರಾತ್‌ನ ರಾಣಿ-ಕಿ-ವಾವ್ ಹಾಗೂ ಉತ್ತರ ಪ್ರದೇಶದ ಮನ್ ಮಹಲ್ ವೈದ್ ಶಾಲಾ ಸ್ವಾರಕಗಳನ್ನು ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ಮಾತ್ರ ವೀಕ್ಷಣೆಗೆ ಅವಕಾಶವಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com