ಇತಿಹಾಸದಲ್ಲೇ ಮೊದಲು! ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಪ್ರಕರಣಕ್ಕೆ ಸಿಜೆಐ ಅಸ್ತು

ಅಲಹಾಬಾದ್ ಹೈಕೋರ್ಟ್ ಹಾಲಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಸ್.ಎನ್. ಶುಕ್ಲಾ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಲು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್....
ರಂಜನ್ ಗೊಗೊಯ್
ರಂಜನ್ ಗೊಗೊಯ್
ನವದೆಹಲಿ: ಅಲಹಾಬಾದ್ ಹೈಕೋರ್ಟ್ ಹಾಲಿ ನ್ಯಾಯಾಧೀಶರಾದ  ನ್ಯಾಯಮೂರ್ತಿ ಎಸ್.ಎನ್. ಶುಕ್ಲಾ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಲು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಸಿಬಿಐಗೆ ಅನುಮತಿ ನೀಡಿದ್ದಾರೆ. ಈ ಮೂಲಕ ಭಾರತ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
ಖಾಸಗಿ ಕಾಲೇಜುಗಳಿಗೆ ಎಂಬಿಬಿಎಸ್ ದಾಖಲಾತಿಗೆ ಶುಕ್ಲಾ ನೆರವಾಗಿದ್ದರೆಂದು ಅವರ ವಿರುದ್ಧ ಆರೋಪವಿತ್ತು.
ಹಾಲಿ ನ್ಯಾಯಾಧೀಶರೊಬ್ಬರ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿರುವುದು ಇದೇ ಮೊದಲಾಗಿದ್ದು ಹಿಂದೆ, ಹೈಕೋರ್ಟ್ ನ್ಯಾಯಾಧೀಶರನ್ನು ವಿಚಾರಣೆಗೆ ಒಳಪಡಿಸಲು ಅನುಮತಿಗಾಗಿ ಕೇಂದ್ರ ಸಂಸ್ಥೆ ಸಿಜೆಐಗೆ ಪತ್ರ ಬರೆದಿತ್ತು2018 ರಲ್ಲಿ, ಆಗಿನ ಸಿಜೆಐ ದೀಪಕ್ ಮಿಶ್ರಾ ಅವರು ಶುಕ್ಲಾ ಅವರನ್ನು ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದರಾದರೂ ಶುಕ್ಲಾ ಅದಕ್ಕೆ ನಿರಾಕರಿಸಿದ್ದರು.ಳೆದ ತಿಂಗಳು ಕೂಡ ಸಿಜೆಐ ಗೊಗೊಯ್  ಶುಕ್ಲಾ ಅವರ ಮೇಲಿನ ಆರೋಪದ ತನಿಖೆಯಾಗಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಸತ್ತಿನಲ್ಲಿ ನಿರ್ಣಯ ತೆಗೆದುಕೊಳ್ಳಿ ಎಂದು ಪತ್ರ ಮುಖೇನ ಕೇಳೀದ್ದರು.
2017 ರಲ್ಲಿ ಶುಕ್ಲಾ ವಿರುದ್ಧದ ದೂರಿನಲ್ಲಿ, ಸಿಜೆಐ ಮಿಶ್ರಾ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಗಡುವು ವಿಸ್ತರಿಸಿದ ಕಾರಣ ವೈದ್ಯಕೀಯ ಕಾಲೇಜಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ ಆರೋಪಿಸಿ ಅದರ ತನಿಖೆಗಾಗಿ ನ್ಯಾಯಾಂಗ ಸಮಿತಿಯನ್ನು ನೇಮಕ ಮಾಡಿತ್ತು.
ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಸೂಲ್ತ ಪುರಾವೆಗಳನ್ನು ಸಲ್ಲಿಸಿ ಸಿಜೆಐನಿಂದ ಅನುಮತಿ ಪಡೆಯದೆ ಯಾವುದೇ ತನಿಖಾ ಸಂಸ್ಥೆಗಳೂ ಪ್ರಕರಣ ದಾಖಲಿಸಿಕೊಳ್ಳುವಂತಿಲ್ಲ ಎಂದು 1991 ಜುಲೈ 25ರಂದು ಕೆ. ವೀರಸ್ವಾಮಿ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com