ರಾತ್ರೋ ರಾತ್ರಿ ಡೈವೋರ್ಸ್ ನೀಡುತ್ತಾರೆ ಎಂಬ ಭಯ ಈಗ ಇಲ್ಲ: ಇಶ್ರತ್ ಜಹಾನ್

ಕೊನೆಗೂ ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ, ರಾತ್ರೋ ರಾತ್ರಿ ತಲಾಖ್ ಹೇಳಿಬಿಡುತ್ತಾರೆ ಎಂಬ ಭಯ ಈಗಿಲ್ಲ ಎಂದು ಇಶ್ರತ್ ಜಹಾನ್ ಹೇಳಿದ್ದಾರೆ....
ಇಶ್ರತ್ ಜಹಾನ್
ಇಶ್ರತ್ ಜಹಾನ್
ಕೊಲ್ಕೊತಾ:  ಕೊನೆಗೂ ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ, ರಾತ್ರೋ ರಾತ್ರಿ ತಲಾಖ್ ಹೇಳಿಬಿಡುತ್ತಾರೆ ಎಂಬ ಭಯ ಈಗಿಲ್ಲ ಎಂದು ಇಶ್ರತ್ ಜಹಾನ್ ಹೇಳಿದ್ದಾರೆ.
ತ್ರಿವಳಿ ತಲಾಖ್ ವಿರೋಧಿಸಿ ಸುಪ್ರೀಂಕೋರ್ಟ್ ನಲ್ಲಿ ಇಶ್ರತ್ ಜಹಾನ್ ಅರ್ಜಿ ಸಲ್ಲಿಸಿದ್ದರು.ಇದು ತಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿಕೊಂಡಿದ್ದಾರೆ,
ಕೇಂದ್ರದ ನಿರ್ಧಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ, ಇದು ಇತಿಹಾಸದಲ್ಲಿ ಬರೆದಿಡುವ ವಿಷಯವಾಗಿದೆ ಎಂದು ಹೇಳಿದ್ದಾರೆ. ಮುಸ್ಲಿಂ ಮಹಿಳೆಯರ ಜೀವನಕ್ಕೆ ಒಂದು ಗೌರವ ಸಿಕ್ಕಿದೆ, ಇದರಿಂದ ಹೊಸ ಅಧ್ಯಾಯ ಬರೆದಂತಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಇಶ್ರತ್ ಜಹಾನ್ ಬಿಜೆಪಿ ಸೇರಿದ್ದರು. ತಾವು ಸುಪ್ರಿಂಕೋರ್ಟ್ ಗೆ ಅರ್ಜಿ ಸಲ್ಲಿಸಿದ ಮೇಲೆ ನನ್ನ ಸುತ್ತಮುತ್ತಲಿನವರಿಂದ ನನಗೆ ಉತ್ತಮ ಆತಿಥ್ಯ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ನಾನು ಹನುಮಂತ ಚಾಲೀಸಾ ಪಠಣದಲ್ಲಿ ಭಾಗವಹಿಸಿದ್ದಕ್ಕೆ ನನ್ನನ್ನು ಹಲವರು ನಿಂದಿಸಿದ್ದರು. ಜೊತೆಗೆ ಬೆದರಿಕೆ ಹಾಕಿದ್ದರು ಎಂದು  ಹೇಳಿದ್ದಾರೆ. 
ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ವಿರೋಧಿಸುವವರಿಗೆ ಈ ಪದ್ಧತಿಯಿಂದಾಗಿ ಬಲಿಪಶುಗಳಾಗುವವರ ಬಗ್ಗೆ ಅರಿವಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜೀವನ ಎಷ್ಟು ಕಷ್ಟ ಎಂಬುದನ್ನು ನಾನು ಅನುಭವಿಸಿದ್ದೇನೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com