ಉನ್ನಾವ್ ರೇಪ್ ಪ್ರಕರಣ: ಸಂತ್ರಸ್ತೆಯ ಪತ್ರ ಬಂದಿಲ್ಲ-ಸಿಜೆಐ; ವರದಿ ಕೇಳಿದ ಸುಪ್ರೀಂ

ಉನ್ನಾವ್ ರೇಪ್ ಪ್ರಕರಣದ ಸಂತ್ರಸ್ತೆ ಸಿಜೆಐ ಗೆ ಬರೆದ ಪತ್ರ ಅವರಿಗೇಕೆ ತಲುಪಿಲ್ಲ ಎಂಬ ಬಗ್ಗೆ ತನ್ನ ಪ್ರಧಾನ ಕಾರ್ಯದರ್ಶಿಯಿಂದ ಸುಪ್ರೀಂ ಕೋರ್ಟ್ ವರದಿ ಕೇಳಿದೆ.
ಉನ್ನಾವ್ ರೇಪ್ ಪ್ರಕರಣ: ಸಂತ್ರಸ್ತೆಯ ಪತ್ರ ಬಂದಿಲ್ಲ-ಸಿಜೆಐ; ವರದಿ ಕೇಳಿದ ಸುಪ್ರೀಂ
ಉನ್ನಾವ್ ರೇಪ್ ಪ್ರಕರಣ: ಸಂತ್ರಸ್ತೆಯ ಪತ್ರ ಬಂದಿಲ್ಲ-ಸಿಜೆಐ; ವರದಿ ಕೇಳಿದ ಸುಪ್ರೀಂ
ನವದೆಹಲಿ: ಉನ್ನಾವ್ ರೇಪ್ ಪ್ರಕರಣದ ಸಂತ್ರಸ್ತೆ ಸಿಜೆಐ ಗೆ ಬರೆದ ಪತ್ರ ಅವರಿಗೇಕೆ ತಲುಪಿಲ್ಲ ಎಂಬ ಬಗ್ಗೆ ತನ್ನ ಪ್ರಧಾನ ಕಾರ್ಯದರ್ಶಿಯಿಂದ ಸುಪ್ರೀಂ ಕೋರ್ಟ್ ವರದಿ ಕೇಳಿದೆ. 
ತನಗೆ ಜೀವಬೆದರಿಕೆ ಇದೆ ಎಂದು ಸಂತ್ರಸ್ತೆ ಬರೆದಿದ್ದ ಪತ್ರ ಇನ್ನೂ ತಮಗೆ ತಲುಪಿಲ್ಲ. ಆದರೆ ಮಾಧ್ಯಮಗಳಲ್ಲಿ ನಾನು ಪತ್ರ ಓದಿದ್ದೇನೆ ಎಂದು ವರದಿಯಾಗುತ್ತಿದೆ ಎಂದು ಸಿಜೆಐ ರಂಜನ್ ಗೊಗೋಯ್ ಹೇಳಿದ್ದಾರೆ. 
ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಅಮಿಕಸ್ ಕ್ಯೂರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ವಕೀಲ ವಿ.ಗಿರಿ ಉನ್ನಾವ್ ರೇಪ್ ಪ್ರಕರಣದ ಬಗ್ಗೆ ಶೀಘ್ರ ವಿಚಾರಣೆ ನಡೆಯಬೇಕೆಂದು ಕೋರಿದಾಗ ಸಿಜೆಐ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 
ಇದೇ ವೇಳೆ ಕೋರ್ಟ್ ಉನ್ನಾವ್ ರೇಪ್ ಪ್ರಕರಣದ ಸಂತ್ರಸ್ತೆ ಅಪಘಾತಕ್ಕೀಡಾಗಿರುವುದರ ಬಗ್ಗೆ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಅಧಿಕಾರಿಗಳಿಗೆ ಸೂಚನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com