ಸೈಬರ್ ಫ್ರಾಡ್: ಡೇಟಿಂಗ್ ವೆಬ್ ಸೈಟ್ ಗೀಳಿನಿಂದ 14 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ!

ಡೇಟಿಂಗ್ ವೆಬ್ ಸೈಟ್ ನಿಂದ ಮಾನ್ಸೂರಾಬಾದಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ 14 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದ್ರಾಬಾದ್: ಆನ್ ಲೈನ್ ನಲ್ಲಿ ಲೈಂಗಿಕತೆಗೆ ಸಂಬಂಧಿಸಿದಂತೆ ವಿವಿಧ ಜಾಹೀರಾತುಗಳನ್ನು ನೋಡಿ ಜನರನ್ನು ಮೋಸ ಮಾಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ.
ಇದೇ ರೀತಿಯಲ್ಲಿ ಡೇಟಿಂಗ್ ವೆಬ್ ಸೈಟ್ ನಿಂದ ಮಾನ್ಸೂರಾಬಾದಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ 14 ಲಕ್ಷ ರೂಪಾಯಿ ಕಳೆದುಕೊಂಡಿರುವ  ಘಟನೆ ನಡೆದಿದೆ.
22 ವರ್ಷದ  ಇಂಜಿನಿಯರಿಂಗ್ ವಿದ್ಯಾರ್ಥಿ ಒಂದು ತಿಂಗಳ ಹಿಂದೆ ಡೇಟಿಂಗ್ ವೆಬ್ ಸೈಟ್ ನಲ್ಲಿ ಎಸ್ಕಾರ್ಟ್ ಸರ್ವೀಸ್  ಜಾಹೀರಾತು ನೋಡಿ ಆಕರ್ಷಿತಗೊಂಡಿದ್ದು,  ಲೈಂಗಿಕ ಸೇವೆ ಪಡೆಯಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ನಂತರ ನೋಂದಣಿಯ ನೆಪದಲ್ಲಿ ಮೊದಲು ಸ್ವಲ್ಪ ಹಣ ಕಟ್ಟಿಸಿಕೊಳ್ಳಲಾಗಿದೆ. ತದನಂತರ ವಿವಿಧ ರೀತಿಯ ಸುಳ್ಳುಗಳನ್ನು ಹೇಳಿ  ಸುಮಾರು 14 ಲಕ್ಷ ರೂಪಾಯಿ ಪೀಕಿರುವುದಾಗಿ ಆತ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com