ಯುಪಿಎ ಅವಧಿಯ ವಿಮಾನಯಾನ ಹಗರಣ: ಮಾಜಿ ಸಚಿವ ಪ್ರಫುಲ್ ಪಟೇಲ್ ಗೆ ಇಡಿ ಸಮನ್ಸ್

ಯುಪಿಎ ಆಡಳಿತಾವಧಿಯಲ್ಲಿ ನಡೆದಿದ್ದ ವಿಮಾನಯಾನ ಹಗರಣದ ಸಂಬಂಧ ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ನಾಯಕ ಪ್ರಫುಲ್ ಪಟೇಲ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಯುಪಿಎ ಅವಧಿಯ ವಿಮಾನಯಾನ ಹಗರಣ: ಮಾಜಿ ಸಚಿವ ಪ್ರಫುಲ್ ಪಟೇಲ್ ಗೆ ಇಡಿ ಸಮನ್ಸ್
ಯುಪಿಎ ಅವಧಿಯ ವಿಮಾನಯಾನ ಹಗರಣ: ಮಾಜಿ ಸಚಿವ ಪ್ರಫುಲ್ ಪಟೇಲ್ ಗೆ ಇಡಿ ಸಮನ್ಸ್
ನವದೆಹಲಿ: ಯುಪಿಎ ಆಡಳಿತಾವಧಿಯಲ್ಲಿ ನಡೆದಿದ್ದ ವಿಮಾನಯಾನ ಹಗರಣದ ಸಂಬಂಧ ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ನಾಯಕ ಪ್ರಫುಲ್ ಪಟೇಲ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. 
ರಾಜ್ಯಸಭೆಯ ಸದಸ್ಯರಾಗಿರುವ ಪ್ರಫುಲ್ ಪಟೇಲ್ ಗೆ ಜೂ.06 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ವಿಮಾನಯಾನ ಹಗರಣ ನಡೆದಿತ್ತು. ಪ್ರಫುಲ್ ಪಟೇಲ್ ಹಗರಣದ ಪ್ರಮುಖ ಆರೋಪಿ ದೀಪಕ್ ತಲ್ವಾರ್ ಮತ್ತು ಅವರ ಪುತ್ರ ಆದಿತ್ಯ ತಲ್ವಾರ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ. 
ದೀಪಕ್ ತಲ್ವಾರ್ ಮತ್ತು ಪ್ರಫುಲ್ ಪಟೇಲ್ ನಡುವೆ ಇ-ಮೇಲ್ ಸಂದೇಶಗಳ ನೈಜ ಸಾಕ್ಷಿ ಇದೆ ಎಂದು ಇಡಿ ಮೂಲಗಳು ತಿಳಿಸಿವೆ. ದೀಪಕ್ ತಲ್ವಾರ್ ಮತ್ತು ಅವರ ಪುತ್ರ ಆದಿತ್ಯ ತಲ್ವಾರ್ ವಿರುದ್ಧ ತನಿಖಾ ಸಂಸ್ಥೆ ಈಗಾಗಲೇ ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ  ಆರೋಪಪಟ್ಟಿ ಸಲ್ಲಿಸಿದೆ. ಇಬ್ಬರ ವಿರುದ್ಧವೂ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ ಮತ್ತು ಅವರಿಬ್ಬರೂ ಅಂಟಿಗುವಾದಲ್ಲಿ ಇದ್ದಾರೆ ಎನ್ನಲಾಗಿದ್ದು,  ದೀಪಕ್ ತಲ್ವಾರ್ ಅವರು ಪಟೇಲ್ ಅವರಿಗೆ ಪರಮಾಪ್ತರು ಎಂದೂ ಹೇಳಲಾಗಿದೆ. ಆಗಸ್ಟ್ 2017 ರಲ್ಲಿ ಸಿಬಿಐ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸಿದ ನಂತರ ಜಾರಿ ನಿರ್ದೇಶನಾಲಯ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com