ಕಾಶ್ಮೀರ: ಉಗ್ರ ಸಂಘಟನೆ ತೊರೆದು ಮುಖ್ಯವಾಹಿನಿಗೆ ಮರಳಿದ ಐವರು ಯುವಕರು

ವಿವಿಧ ಉಗ್ರ ಸಂಘಟನೆಗಳಿಗೆ ಸೇರಿದ್ದ ಐವರು ಯುವಕರು, ಪೊಲೀಸರು ಮತ್ತು ಕುಟುಂಬದ ಸದಸ್ಯರ ಪ್ರಯತ್ನದಿಂದಾಗಿ ಉಗ್ರ ಹಾದಿಯನ್ನು ತೊರೆದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಪೊಲೀಸ್ ವಕ್ತಾರರೊಬ್ಬರು ಇಂದು ತಿಳಿಸಿದ್ದಾರೆ.

Published: 01st June 2019 12:00 PM  |   Last Updated: 01st June 2019 06:41 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : UNI
ಶ್ರೀನಗರ: ಹಿಂಸಾಚಾರದ ಹಾದಿ ತುಳಿದು ವಿವಿಧ ಉಗ್ರ ಸಂಘಟನೆಗಳಿಗೆ ಸೇರಿದ್ದ ಐವರು ಯುವಕರು, ಪೊಲೀಸರು ಮತ್ತು ಕುಟುಂಬದ ಸದಸ್ಯರ ಪ್ರಯತ್ನದಿಂದಾಗಿ ಉಗ್ರ ಹಾದಿಯನ್ನು ತೊರೆದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು  ಪೊಲೀಸ್ ವಕ್ತಾರರೊಬ್ಬರು  ಇಂದು  ತಿಳಿಸಿದ್ದಾರೆ.

ಆದಾಗ್ಯೂ, ಅವರ ಹೆಸರನ್ನು ಮತ್ತು ಇತರ ವಿವರಗಳನ್ನು ಭದ್ರತೆಯ ಕಾರಣಗಳಿಗಾಗಿ ಅವರು ಬಹಿರಂಗಪಡಿಸಿಲ್ಲ.

ವಿವಿಧ ಉಗ್ರ ಸಂಘಟನೆ ಸೇರಿದ್ದ ಐವರು ಯುವಕರು ಹಿಂಸೆಯ ದಾರಿ ತೊರೆದು ಅಂತಿಮವಾಗಿ ಮುಖ್ಯವಾಹಿನಿಗೆ ಮರಳಿದ್ದಾರೆ. ಇದು ಅವರ ಕುಟುಂಬದ ಸದಸ್ಯರು ಮತ್ತು ಕುಲ್ಗಾಮ್ ಪೊಲೀಸರು ಪ್ರಯತ್ನದ ಫಲವಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿಮ್ಮ ಮುಂದಿನ ಜೀವನ ಶಾಂತಿಯುತ ಹಾಗೂ ಉಜ್ವಲವಾಗಲಿ ಎಂದು ಅವರಿಗೆ ಪೊಲೀಸರು ಶುಭ ಹಾರೈಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp