ಮೋದಿ ಸಂಪುಟ: 51 ಜನ ಕರೋಡ್ ಪತಿ ಸಚಿವರು, 22 ಸಚಿವರ ವಿರುದ್ದ ಇದೆ ಕ್ರಿಮಿನಲ್ ಕೇಸ್!

ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದು, ಮೇ.31 ರಂದು ಮೊದಲ ಸಚಿವ ಸಂಪುಟ ಸಭೆ ನಡೆದಿದೆ.
Narendra Modi government 2.0: 51 crorepati ministers, 22 face criminal cases, says ADR
Narendra Modi government 2.0: 51 crorepati ministers, 22 face criminal cases, says ADR
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದು, ಮೇ.31 ರಂದು ಮೊದಲ ಸಚಿವ ಸಂಪುಟ ಸಭೆ ನಡೆದಿದೆ. 
ಈ ನಡುವೆ ಜನಪ್ರತಿನಿಧಿಗಳ ಬಗ್ಗೆ ಸಮೀಕ್ಷೆ ನಡೆಸಿರುವ ಎಡಿಆರ್ ವರದಿಯ ಪ್ರಕಾರ ಮೋದಿ ಸಂಪುಟದಲ್ಲಿ 51 ಜನರು ಕರೋಡ್ ಪತಿಗಳಿದ್ದಾರೆ ಎಂದು ತಿಳಿದುಬಂದಿದೆ. 
ಮೋದಿ ಸಚಿವ ಸಂಪುಟದಲ್ಲಿ 58 ಜನ ಸಚಿವರಿದ್ದು, ಈ ಪೈಕಿ 51 ಜನರು ಕೋಟ್ಯಾಧಿಪತಿಗಳಾಗಿದ್ದು, 58 ಸಚಿವರ ಪೈಕಿ 22 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. 
58 ಸಚಿವರ ಪೈಕಿ 56 ಸಚಿವರು ಸಲ್ಲಿಸಿರುವ ಪ್ರಮಾಣ ಪತ್ರವನ್ನು ಅಧ್ಯಯನ ಮಾಡಿ ಎಡಿಆರ್ ಈ ವರದಿ ಪ್ರಕಟಿಸಿದೆ. ಮೋದಿ ಸಂಪುಟದ ಕರೋಡ್ ಪತಿ ಸಚಿವರಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ 14.72 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಎಡಿಆರ್ ವಿಶ್ಲೇಷಿಸಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com