ರಕ್ಷಣಾ ಸಚಿವರಾದ ಬಳಿಕ ಮೊದಲ ಬಾರಿಗೆ ಸಿಯಾಚಿನ್ ಗೆ ರಾಜನಾಥ್ ಸಿಂಗ್ ಭೇಟಿ

ರಕ್ಷಣಾ ಸಚಿವರಾದ ಬಳಿಕ ಮೊದಲ ಬಾರಿಗೆ ಜಗತ್ತಿನ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಗೆ ಭೇಟಿ ನೀಡಿರುವ ರಾಜನಾಥ್ ಸಿಂಗ್, ನಿರ್ಗಲ್ಲು ಪ್ರದೇಶದಲ್ಲಿ ಭದ್ರತೆಗಾಗಿ ನಿಯೋಜಿಸಿರುವ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಯೋಧರೊಂದಿಗೆ ರಾಜನಾಥ್ ಸಿಂಗ್ ಸಂವಾದ
ಯೋಧರೊಂದಿಗೆ ರಾಜನಾಥ್ ಸಿಂಗ್ ಸಂವಾದ

ಜಮ್ಮು- ಕಾಶ್ಮೀರ: ರಕ್ಷಣಾ ಸಚಿವರಾದ ಬಳಿಕ ಮೊದಲ ಬಾರಿಗೆ ಜಗತ್ತಿನ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಗೆ ಭೇಟಿ ನೀಡಿರುವ ರಾಜನಾಥ್ ಸಿಂಗ್, ನಿರ್ಗಲ್ಲು ಪ್ರದೇಶದಲ್ಲಿ ಭದ್ರತೆಗಾಗಿ ನಿಯೋಜಿಸಿರುವ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ತೀವ್ರ ತರಹದ ಚಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಎಲ್ಲರೂ ಸದೃಢವಾದಂತಹ ಬಟ್ಟೆ ಧರಿಸಿರುವ ಪೋಟೋಗಳನ್ನು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ವಿಶ್ವದಲ್ಲಿಯೇ ಅತಿ ಎತ್ತರದ ಯುದ್ಧ ಭೂಮಿಯಾಗಿರುವ ಸಿಯಾಚಿನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿರುವುದಾಗಿ ಅವರು ಟ್ವೀಟ್ ನಲ್ಲಿ  ತಿಳಿಸಿದ್ದಾರೆ.

ಚಳಿಗಾಲದಲ್ಲೂ ಮೈನಸ್ 60 ಡಿಗ್ರಿ ಉಷ್ಣಾಂಶ ಹೊಂದಿರುವ ಸಿಯಾಚಿನ್ ನಲ್ಲಿ ಬಿಳಿ ಬಣ್ಣದ ಜಾಕೆಟ್ ಧರಿಸಿರುವ ಪೋಟೋವನ್ನು ರಾಜನಾಥ್ ಸಿಂಗ್  ಶೇರ್ ಮಾಡಿದ್ದಾರೆ.

ಸಿಯಾಚಿನ್ ನಲ್ಲಿ ದೇಶ ಸಲ್ಲಿಸುತ್ತಿರುವ ಯೋಧರ ಬಗ್ಗೆ ಹೆಮ್ಮೆಯಾಗುತ್ತಿದೆ.  ದೇಶ ಸೇವೆಗಾಗಿ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವ ಪೋಷಕರ ಬಗ್ಗೆಗೂ ಹೆಮ್ಮೆಯುಂಟಾಗುತ್ತದೆ. ಅವರಿಗೆ ವೈಯಕ್ತಿಕವಾಗಿ ಧನ್ಯವಾದ ಹೇಳುವುದಾಗಿ ರಾಜನಾಥ್ ಸಿಂಗ್ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಸಿಯಾಚಿನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತ ಹುತಾತ್ಮರಾಗಿರುವ ಸುಮಾರು 1100 ಕ್ಕೂ ಹೆಚ್ಚು ಸೈನಿಕರಿಗೆ ರಾಜನಾಥ್ ಸಿಂಗ್ ನಮನ ಸಲ್ಲಿಸಿದರು. ಅವರ ಸೇವೆ ಹಾಗೂ ತ್ಯಾಗವನ್ನು ದೇಶ ಯಾವಾಗಲೂ ಸ್ಮರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com