ವಿಶ್ವದ 15 ಅತಿ ಹೆಚ್ಚು ಉಷ್ಣಾಂಶದ ಪ್ರದೇಶಗಳಲ್ಲಿ ಭಾರತದಲ್ಲಿಯೇ 11 ಸ್ಥಳಗಳು

ಅಂತೆಯೇ ವಿಶ್ವದ 15 ಅತಿ ಹೆಚ್ಚಿನ ಉಷ್ಣಾಂಶವಿರುವ ಪ್ರದೇಶಗಳಲ್ಲಿ ಭಾರತದಲ್ಲಿಯೇ 15 ಸ್ಥಳಗಳಿವೆ ಎಂದು ಹವಾಮಾನ ಮೇಲ್ವಿಚಾರಣೆ ವೆಬ್ ಸೈಟ್ ಇಐ ಡೊರಾಡೊ ತಿಳಿಸಿದೆ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು

ನವದೆಹಲಿ: ದೇಶದ ಹಲವೆಡೆ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಟಿದ್ದು, ತೀವ್ರ ರೀತಿಯ ಬಿಸಿಗಾಳಿಯ ಅನುಭವವಾಗುತ್ತಿದೆ. ಅಂತೆಯೇ ವಿಶ್ವದ 15 ಅತಿ ಹೆಚ್ಚಿನ ಉಷ್ಣಾಂಶವಿರುವ ಪ್ರದೇಶಗಳಲ್ಲಿ ಭಾರತದಲ್ಲಿಯೇ 15 ಸ್ಥಳಗಳಿವೆ ಎಂದು ಹವಾಮಾನ ಮೇಲ್ವಿಚಾರಣೆ ವೆಬ್ ಸೈಟ್ ಇಐ ಡೊರಾಡೊ ತಿಳಿಸಿದೆ.

ರಾಜಸ್ತಾನದ ಚೂರುವಿನಲ್ಲಿ ಅತಿ ಹೆಚ್ಚು 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬೇಸಿಗೆ ಕಾಲದಲ್ಲಿ ರಾಜಸ್ತಾನ ಹಾಗೂ ಮಧ್ಯ ಪ್ರದೇಶದಲ್ಲಿ  ಉಷ್ಣಾಂಶದ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇವೆರಡೂ ರಾಜ್ಯಗಳಲ್ಲಿ ತೀವ್ರ ಬಿಸಿಗಾಳಿ ಪರಿಸ್ಥಿತಿ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಆದರೆ ಈ ವರ್ಷ ದಖನ್ ಪ್ರಸ್ಥಭೂಮಿ, ಪೂರ್ವ ಹಾಗೂ ದಕ್ಷಿಣ ಭಾಗದಲ್ಲೂ ಅತಿ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಇದರಿಂದಾಗಿ ಬೀದಿ ವ್ಯಾಪಾರಿಗಳು, ಸಂಚಾರಿ ಪೊಲೀಸರು, ಆಟೋ ರಿಕ್ಷಾ ಚಾಲಕರು ಬಿಸಿಲಿನ ಬೇಗೆಯಲ್ಲಿ ನರಳುವಂತಾಗಿದೆ.

ತೀವ್ರತರವಾದ ಬಿಸಿಯಿಂದಾಗಿ 2010 ರಿಂದ 2018ರ ನಡುವೆ ದೇಶದಲ್ಲಿ ಸುಮಾರು 6, 167 ಮಂದಿ ಮೃತಪಟ್ಟಿದ್ದಾರೆ. 2015ರ ಒಂದೇ ವರ್ಷದಲ್ಲಿ  20181ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಸ್ಥಳಗಳು                         ಉಷ್ಣಾಂಶ
    15. ಸಾವೈ ಮಾದೊಪುರ್  (ಭಾರತ)   47.  2                                                
ಹವಾಮಾನ ಇಲಾಖೆ ಪ್ರಕಾರ 40 ಡಿಗ್ರಿ ಉಷ್ಠಾಂಶವನ್ನು ಬಿಸಿ ಗಾಳಿ ಎನ್ನಲಾಗುತ್ತದೆ. ಕರಾವಳಿ ತೀರದಲ್ಲಿ 37 ಹಾಗೂ ಗುಡ್ಡ ಗಾಡು ಪ್ರದೇಶಗಳಲ್ಲಿ 30 ಡಿಗ್ರಿ  ಹೆಚ್ಚಿದ್ದರೂ ಬಿಸಿ ಗಾಳಿ ಎನ್ನಲಾಗುತ್ತದೆ.
ನಾಸಾ ಪ್ರಕಾರ ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಾಮಾನ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. 1880 ಮತ್ತು 2018ರ ಅವಧಿಯ ನಡುವೆ ಶೇ, 0.6 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಹೆಚ್ಚಾಗಿದೆ. ಭಾರತದಲ್ಲಿ 0. 8 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಳವಾಗಿದೆ. ಈ ವರ್ಷಮುಂಗಾರು ಕೈ ಕೊಟ್ಟರೆ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com