ಆಶಾ ಆರೋಗ್ಯ ಕಾರ್ಯಕರ್ತೆಯರ ವೇತನ 10 ಸಾವಿರ ರೂ.ಗೆ ಹೆಚ್ಚಿಸಿದ ಜಗನ್

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಮುಂದಾಗಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್....

Published: 04th June 2019 12:00 PM  |   Last Updated: 04th June 2019 06:30 AM   |  A+A-


Andhra Pradesh CM Jagan hikes ASHA wages to Rs 10,000, focus on better healthcare

ಜಗನ್ ಮೋಹನ್ ರೆಡ್ಡಿ

Posted By : LSB LSB
Source : UNI
ವಿಜಯವಾಡ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಮುಂದಾಗಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು,  ಆಶಾ ಆರೋಗ್ಯ ಕಾರ್ಯಕರ್ತೆಯರ ವೇತನವನ್ನು ತಿಂಗಳಿಗೆ 10 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿದ್ದಾರೆ.

ಮುಖ್ಯಮಂತ್ರಿ ಅವರು ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಆಶಾ ಕಾರ್ಯಕರ್ತೆಯರ ವೇತನವನ್ನು ತಿಂಗಳಿಗೆ 3 ಸಾವಿರದಿಂದ 10 ಸಾವಿರ ರೂ.ಹೆಚ್ಚಿಸುವ ಆದೇಶ ಹೊರಡಿಸಿದರು.  

ಇದೇ ವೇಳೆ, ಎನ್.ಟಿ.ಅರ್ ಆರೋಗ್ಯ ಶ್ರೀ ಯೋಜನೆಯನ್ನು ವೈಎಸ್ಆರ್ ಆರೋಗ್ಯಶ್ರೀ ಯೋಜನೆ ಎಂದು  ಮರುನಾಮಕರಣ ಮಾಡುವುದಾಗಿ ಅವರು ಘೋಷಿಸಿದರು. 

108 ಆಂಬುಲೆನ್ಸ್ ಸೇವೆಗಳನ್ನು ಪರಿಷ್ಕರಿಸಬೇಕು. 108 ಆಂಬುಲೆನ್ಸ್ ಸೇವೆಗಳು ರಾಜ್ಯಾದ್ಯಂತ ಲಭ್ಯವಾಗುವಂತೆ ಮಾಡಲಾಗುವುದು ಮತ್ತು ಹೆಚ್ಚಿನ ಆಂಬುಲೆನ್ಸ್ ಗಳನ್ನು ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp