ಕಾಶ್ಮೀರ: ಮೂವರು ಪ್ರತ್ಯೇಕತಾವಾದಿಗಳ ಬಂಧನ, 10 ದಿನ ಎನ್ ಐಎ ವಶಕ್ಕೆ

ಪ್ರತ್ಯೇಕತಾವಾದಿಗಳಾದ ಮಸ್ರತ್ ಅಲಂ , ಅಸಿಯಾ ಅಂಡ್ರಾಬಿ ಮತ್ತು ಶಬೀರ್ ಶಾ ಅವರನ್ನು 10 ದಿನಗಳ ಕಾಲ ಎನ್ ಐಎ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ ಎಂದು ವಕೀಲರೊಬ್ಬರು ಹೇಳಿದ್ದಾರೆ.
ಮಸ್ರತ್ ಅಲಂ
ಮಸ್ರತ್ ಅಲಂ

ನವದೆಹಲಿ: 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಜೊತೆಗೆ ನಂಟು ಹೊಂದಿ ಉಗ್ರ ಚಟುವಟಿಕೆಗಳಿಗೆ ಹಣಕಾಸು ಪೂರೈಕೆ ಮಾಡುತ್ತಿದ್ದ ಪ್ರತ್ಯೇಕತಾವಾದಿಗಳಾದ ಮಸ್ರತ್ ಅಲಂ , ಅಸಿಯಾ ಅಂಡ್ರಾಬಿ ಮತ್ತು ಶಬೀರ್ ಶಾ ಅವರನ್ನು 10 ದಿನಗಳ ಕಾಲ ಎನ್ ಐಎ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ ಎಂದು ವಕೀಲರೊಬ್ಬರು ಹೇಳಿದ್ದಾರೆ.

ಈ ಮೂವರನ್ನು ಬಂಧಿಸಿದ್ದ ರಾಷ್ಟ್ರೀಯ ವಿಚಾರಣಾ ದಳ ವಿಶೇಷ ನ್ಯಾಯಾಧೀಶ ರಾಕೇಶ್ ಸ್ಯಾಲ್ ಮುಂದೆ ವಿಚಾರಣೆಗಾಗಿ ಹಾಜರುಪಡಿಸಲಾಯಿತು. ವಾದ, ವಿವಾದ ಆಲಿಸಿದ ನ್ಯಾಯಾಧೀಶರು 15 ದಿನಗಳ ಕಾಲ ವಿಚಾರಣೆಗಾಗಿ ಎನ್ ಐಎ ವಶಕ್ಕೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣಗಳಲ್ಲಿ ಅಸಿಯಾ ಹಾಗೂ ಶಾ ಈಗಾಗಲೇ ಎನ್ ಐಎ ವಶದಲ್ಲಿದ್ದರು,ಇದೀಗ ಅಲಂನನನ್ನು ಜಮ್ಮು- ಕಾಶ್ಮೀರದಿಂದ ಕರೆತರಲಾಗಿದೆ ಎಂದು ವಕೀಲ ಎಂಎಸ್ ಖಾನ್ ಹೇಳಿದ್ದಾರೆ.

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಹಣಕಾಸು ಪೂರೈಕೆ ಆರೋಪದ ಮೇರೆಗೆ 10 ಪ್ರತ್ಯೇಕತಾವಾದಿಗಳು ಹಾಗೂ ಮಾಸ್ಟರ್ ಮೈಂಡ್ ಸಯ್ಯದ್ ಸಲ್ಲಾವುದ್ದೀನ್, ಸಯೀದ್ ವಿರುದ್ಧ ಎನ್ ಐಎ 2018ರಲ್ಲಿ ಚಾರ್ಜ್ ಶೀಟ್ ದಾಖಲಿಸಿತ್ತು.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120 ಬಿ ( ಅಪರಾಧ ಪಿತ್ತೂರಿ ) ಹಾಗೂ 1 ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ 1967 ರ ಅಡಿಯಲ್ಲಿ ಚಾರ್ಚ್ ಶೀಟ್ ದಾಖಲಿಸಲಾಗಿತ್ತು.
ಕಳೆದ ವರ್ಷ ಜುಲೈ 24 ರಂದು ಮೊದಲ ಬಾರಿಗೆ  ಆರೋಪಿಗಳನ್ನು ಬಂಧಿಸಲಾಗಿತ್ತು.  ಮೇ 30, 2017ರಲ್ಲಿ ಎನ್ ಐಎ ಕೇಸ್ ದಾಖಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com