ಪಾಕಿಸ್ತಾನ ಮದ್ಯ ಕುಡಿದ ಮಂಗನಂತಾಡುತ್ತಿದೆ: ಶಿವಸೇನೆ

ಭಾರತೀಯ ಹೈಕಮಿಷನ್ ನ ಆಹ್ವಾನದ ಮೇರೆಗೆ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದವರಿಗೆ ಕಿರುಕುಳ ನೀಡಿರುವ ಪಾಕಿಸ್ತಾನದ ವಿರುದ್ಧ ಶಿವಸೇನೆ ಕೆಂಡಾಮಂಡಲವಾಗಿದೆ.

Published: 04th June 2019 12:00 PM  |   Last Updated: 04th June 2019 12:20 PM   |  A+A-


Pakistan behaving like a drunken monkey: Shiv Sena on Iftar party row

ಪಾಕಿಸ್ತಾನ ಮದ್ಯ ಕುಡಿದ ಮಂಗನಂತಾಡುತ್ತಿದೆ: ಶಿವಸೇನೆ

Posted By : SBV SBV
Source : Online Desk
ಮುಂಬೈ: ಭಾರತೀಯ ಹೈಕಮಿಷನ್ ನ ಆಹ್ವಾನದ ಮೇರೆಗೆ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದವರಿಗೆ ಕಿರುಕುಳ ನೀಡಿರುವ ಪಾಕಿಸ್ತಾನದ ವಿರುದ್ಧ ಶಿವಸೇನೆ ಕೆಂಡಾಮಂಡಲವಾಗಿದೆ. 

ಸಾಮ್ನಾ ಪತ್ರಿಕೆಯಲ್ಲಿ ಪಾಕಿಸ್ತಾನದ ನಡೆಯನ್ನು ಖಂಡಿಸಿರುವ ಉದ್ಧವ್ ಠಾಕ್ರೆ, ಪಾಕಿಸ್ತಾನದ ಸ್ಥಿತಿ ಮದ್ಯ ಕುಡಿದ ಮಂಗನಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿ ಸರ್ಕಾರ ನಡೆಸಿದ ಬಾಲಾಕೋಟ್ ವೈಮಾನಿಕ ದಾಳಿಯಿಂದ ಪಾಕಿಸ್ತಾನ ನಲುಗಿದೆ. ಈಗಲೂ ಪಾಕಿಸ್ತಾನ ಹತಾಶ ಯತ್ನ ಮಾಡುತ್ತಿದೆ ಎಂದು ಉದ್ಧವ್ ಠಾಕ್ರೆ ಪಾಕ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅಭೂತಪೂರ್ವ ಬಹುಮತದೊಂದಿಗೆ ಎರಡನೇ ಅವಧಿಗೆ ಅಧಿಕಾರಕ್ಕೇರಿರುವ ವಾಸ್ತವವನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. 

ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲೇ ಇಮ್ರಾನ್ ಖಾನ್ ಪ್ರಧಾನಿಗೆ ಶುಭಾಶಯ ತಿಳಿಸಿ, ಶಾಂತಿ ಮಾತುಕತೆ ಬಗ್ಗೆ ಮಾತನಾಡಿದ್ದರು. ಆದರೆ ಪಾಕಿಸ್ತಾನದಲ್ಲಿ ಭಾರತೀಯ ಹೈಕಮಿಷನ್ ನ ಆಹ್ವಾನದ ಮೇರೆಗೆ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದವರಿಗೆ ಕಿರುಕುಳ ನೀಡುವುದನ್ನೂ ಶಾಂತಿ ಸ್ಥಾಪನೆಯ ಭಾಗವೆಂದು ಪರಿಗಣಿಸಬೇಕೆ? ಎಂದು ಠಾಕ್ರೆ ಪ್ರಶ್ನಿಸಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp