ರಾಷ್ಟ್ರ ರಾಜಧಾನಿಯಲ್ಲೇ ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನವಿಲ್ಲ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಆಯುಷ್ಮಾನ್ ಭಾರತ್ ಯೋಜನೆಯನ್ನು ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಅನುಷ್ಠಾನಗೊಳಿಸುವುದಿಲ್ಲ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಆಯುಷ್ಮಾನ್ ಭಾರತ್  ಯೋಜನೆಯನ್ನು ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಅನುಷ್ಠಾನಗೊಳಿಸುವುದಿಲ್ಲ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್  ತಿಳಿಸಿದ್ದಾರೆ.

ದೆಹಲಿಯಲ್ಲಿ ಸುಮಾರು 2 ಕೋಟಿ ಜನರಿದ್ದಾರೆ. ಈ ಯೋಜನೆ ಕೇವಲ 10 ಲಕ್ಷ  ಬಡ ಜನರ ಆರೋಗ್ಯದ ಎಚ್ಚರಿಕೆ ವಹಿಸಲಿದೆ. ಇದನ್ನು ನಾವು ಅನುಷ್ಠಾನಗೊಳಿಸುದಿಲ್ಲ. ದೆಹಲಿ ಸರ್ಕಾರ ಯಾವುದೇ ನೀತಿಯನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ, ಶ್ರೀಮಂತ ಅಥವಾ ಬಡವರಿಗೆ  ಉಚಿತ  ಚಿಕಿತ್ಸೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ

ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ನಿಲುವನ್ನು ದೆಹಲಿ ಸರ್ಕಾರ ಮರು ಪರಿಶೀಲಿಸಬೇಕೆಂದು ಕೇಂದ್ರ ಸಚಿವ ಹರ್ಷವರ್ಧನ್ ಹೇಳಿಕೆಗೆ ಜೈನ್ ಈ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರ ಯೋಜನೆಗಳು ಕೇವಲ ಕಾಗದ ಪತ್ರದಲ್ಲಿ ಮಾತ್ರ ಅನುಷ್ಠಾನಗೊಳ್ಳುತ್ತವೆ ಎಂದು ಆರೋಪಿಸಿದ ಅವರು, ಉತ್ತರ ಪ್ರದೇಶ ,ಹರಿಯಾಣದಂತಹ ಜನರು ದೆಹಲಿಯ ಆಸ್ಪತ್ರೆಗೆ ಏಕೆ ಬರುತ್ತಾರೆ ? ಎಂದು ಪ್ರಶ್ನಿಸಿದ್ದಾರೆ
ಎಲ್ಲವೂ ಕೇವಲ ಕಾಗದ ಮೇಲಷ್ಟೇ  ಎಂದು ಕಿಡಿಕಾರಿರುವ ಅವರು, ಬೇಕಾದರೆ ಈ ಯೋಜನೆಯನ್ನು  ಹರಿಯಾಣ , ಉತ್ತರ ಪ್ರದೇಶದಲ್ಲಿ  ಜಾರಿಗೆ ತರಲಿ, ದೆಹಲಿ ಜನರ ಆರೋಗ್ಯದ ಬಗ್ಗೆ ನಾವು ಜವಾಬ್ದಾರಿ ಹೊರುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com