ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ನಳಿನ್ ಪ್ರಥಮ, ರಾಜ್ಯದಲ್ಲಿ ಫಣೀಂದ್ರ ಫಸ್ಟ್

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) - 2019 ಫಲಿತಾಂಶ ಹೊರಬಿದ್ದಿದ್ದು ರಾಜಸ್ಥಾನದ ನಳಿನ್ ಖಂಡೇವಾಲ್ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) - 2019 ಫಲಿತಾಂಶ ಹೊರಬಿದ್ದಿದ್ದು ರಾಜಸ್ಥಾನದ ನಳಿನ್ ಖಂಡೇವಾಲ್ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಡೆಂಟಲ್  ಕೌನ್ಸಿಲ್ ಆಫ್ ಇಂಡಿಯಾ ಅನುಮೋದಿಸಿದ ವೈದ್ಯಕೀಯ ಮತ್ತು ದಂತ  ವೈದ್ಯಕೀಯ  ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸುಗಳಿಗೆ  ಪ್ರವೇಶ ಪಡೆಯಲು ನಿಟ್ ಪರೀಕ್ಷೆ ಬರೆಯಏಕಾಗುತ್ತದೆ.
ದೆಹಲಿಯ ಭವಿಕ್ ಬನ್ಸಾಲ್ ಮತ್ತು ಉತ್ತರ ಪ್ರದೇಶದ  ಅಕ್ಷತ್ ಕೌಶಿಕ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ತೆಲಂಗಾಣದ ಮಾಧುರಿ ರೆಡ್ಡಿ ಜಿ ಬಾಲಕಿಯರಲ್ಲಿ ಅಗ್ರ ಸ್ಥಾನ ಗಳಿಸಿಕೊಂಡಿದ್ದಾರೆ.ಈಕೆ ಅಖಿಲ ಬಾರತ ಮಟ್ಟದಲ್ಲಿ ಏಳನೇ ಸ್ಥಾನದಲ್ಲಿದ್ದಾರೆ.
14,10,755  ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 7,97,042 ಪ್ರವೇಶಕ್ಕೆ ಅರ್ಹರಾಗಿದ್ದಾರೆ.ಮೇ 5 ಮತ್ತು ಮೇ 20 ರಂದು ಎನ್ಟಿಎ ದೇಶದಾದ್ಯಂತ ನೀಟ್ ಪರೀಕ್ಷೆಯನ್ನು ಆಯೋಜಿಸಿತ್ತು.
50 ರ್ಯಾಂಕ್ ವಿಜೇತರಲ್ಲಿ ರಾಜ್ಯದ ಮೂವರು
ಇನ್ನು ನೀಟ್ ಪರೀಕ್ಷೆಯಲ್ಲಿ ಐವತ್ತನೇ ರ್ಯಾಂಕ್ ವರೆಗಿನ ಪಟ್ಟಿಯಲ್ಲಿ ರಾಜ್ಯದ ಮೂವರು ಸ್ಥಾನ ಪಡೆದಿದ್ದಾರೆ.
ಡಿ.ಆರ್. ಫಣೀಂದ್ರ (36), ಆನಂದ್ (43) ಹಾಗೂ ಪ್ರಗ್ಯಾ ಮಿತ್ರಾ(ಮಹಿಳಾ ವಿಭಾಗದಲ್ಲಿ 20ನೇ ರ್ಯಾಂಕ್)  ರಾಜ್ಯದಲ್ಲಿ ಉತ್ತಮ ಶ್ರೇಯಾಂಕ ಪಡೆದು ಸಾಧನೆ ಮಾಡಿದವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com