ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಮೋದಿಯ 'ತಾಡಾಸನ' ವಿಡಿಯೋ ವೈರಲ್

ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶದ ಜನರೂ ಸಜ್ಜಾಗುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ತಾಡಾಸನ ವೀಡಿಯೊವನ್ನು ಟ್ವೀಟ್ ಮೂಲಕ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ  ಯೋಗಾಸನದ ಚಿತ್ರ
ಪ್ರಧಾನಿ ಯೋಗಾಸನದ ಚಿತ್ರ
ನವದೆಹಲಿ: ಜೂನ್ 21ರಂದು ನಡೆಯಲಿರುವ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ  ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶದ ಜನರೂ ಸಜ್ಜಾಗುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ತಾಡಾಸನ ವೀಡಿಯೊವನ್ನು ಟ್ವೀಟ್ ಮೂಲಕ ಪೋಸ್ಟ್ ಮಾಡಿದ್ದಾರೆ. 
ತಾಡಾಸನ ಅಥವಾ ಪರ್ವತ ಭಂಗಿಯಾಗಿರುವ ಈ ಯೋಗಾಸನದ ಆನಿಮೇಟೆಡ್ ವೀಡಿಯೊದಲ್ಲಿ ಆಸನ ಹೇಗೆ ಮಾಡುವುದೆಂಬುದನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಜತೆಗೆ ಇದರಿಂದಾಗುವ ಪ್ರಯೋಜನಗಳನ್ನೂ ತಿಳಿಯಪಡಿಸಲಾಗಿದೆ. 
ತಾಡಾಸನವನ್ನು ಸರಿಯಾಗಿ ಮಾಡಿದರೆ , ಇತರೆ ಆಸನಗಳನ್ನು ಸುಲಭವಾಗಿ ಮಾಡಲು ಅನುಕೂಲವಾಗುತ್ತದೆ ಎಂದು ಪ್ರಧಾನಿ ವಿಡಿಯೋ ಟ್ವೀಟ್ ಮಾಡಿ ಹೇಳಿದ್ದಾರೆ. 
3ಡಿ ಆನಿಮೇಶನ್ ವಿಡಿಯೋದಲ್ಲಿ , ಹಸಿರಿನ ಹಿನ್ನೆಲೆಯ ವಾತಾವರಣದಲ್ಲಿ ಸಾಕಷ್ಟು ಗಾಳಿ ಬೆಳಕಿರುವ ಕೊಠಡಿಯಲ್ಲಿ ಮೋದಿಯನ್ನೇ ಹೋಲುವ ವ್ಯಕ್ತಿಯ ಮರೂನ್ ಬಣ್ಣದ ನೆಲಹಾಸಿನ ಮೇಲೆ ನಿಂತುಕೊಂಡು ತಾಡಾಸನ ಮಾಡುವ ಚಿತ್ರಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com