ಆಂಧ್ರ ಪ್ರದೇಶದಲ್ಲಿ ಸಿಬಿಐಗೆ ಅವಕಾಶ, ನಾಯ್ಡು ಆದೇಶ ರದ್ದುಗೊಳಿಸಿದ ಜಗನ್

ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದ ಈ ಹಿಂದಿನ ಚಂದ್ರಬಾಬು ನಾಯ್ಡು ಸರ್ಕಾರದ ವಿವಾದಾತ್ಮಕ ಸರ್ಕಾರದ ಆದೇಶವನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ರದ್ದುಗೊಳಿಸಿದ್ದು, ಸಿಬಿಐ ತನಿಖೆಗೆ ಹಾದಿ ಸುಗಮಗೊಳಿಸಲಾಗಿದೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ
ಅಮರಾವತಿ: ಆಂಧ್ರ ಪ್ರದೇಶದಲ್ಲಿ ಕೇಂದ್ರ ತನಿಖಾ ಸಂಸ್ಥೆ -ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದ ಈ ಹಿಂದಿನ ಚಂದ್ರಬಾಬು ನಾಯ್ಡು  ಸರ್ಕಾರದ ವಿವಾದಾತ್ಮಕ ಸರ್ಕಾರದ ಆದೇಶವನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ  ರದ್ದುಗೊಳಿಸಿದ್ದು,  ಸಿಬಿಐ ತನಿಖೆಗೆ ಹಾದಿ ಸುಗಮಗೊಳಿಸಲಾಗಿದೆ. 
ಕಳೆದ ವರ್ಷ ನವೆಂಬರ್ 8 ರಂದು ಕೇಂದ್ರ ಸರ್ಕಾರಿ ಅಧಿಕಾರಿಗಳು, ಕೇಂದ್ರ ಸಂಸ್ಥೆಗಳು, ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಸಿಬಿಐ  ತನಿಖೆ ನಡೆಸಲು , ಶೋಧ ಕಾರ್ಯಾಚರಣೆ ನಡೆಸಲು ಇದ್ದಂತಹ  ಒಪ್ಪಂದವನ್ನು ಹಿಂತೆಗೆದುಕೊಂಡಿತ್ತು. 
ಮೇ 30 ರಂದು ಅಧಿಕಾರಕ್ಕೆ ಬಂದ ವೈಎಸ್ ಆರ್ ಕಾಂಗ್ರೆಸ್ ಪಕ್ಷ  ಇಂದು ನವೆಂಬರ್ 8 ರಂದು ಚಂದ್ರಬಾಬು ನಾಯ್ಡು ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ. ವೈಎಸ್ ಜಗನ್ ಮೋಹನ್ ರೆಡ್ಡಿ  ನಿರ್ದೇಶನದ ಮೇರೆಗೆ ವಿಶೇಷ ಮುಖ್ಯ ಕಾರ್ಯದರ್ಶಿ ಮನಮೋಹನ್ ಸಿಂಗ್ ಈ ಆದೇಶ ಪ್ರಕಟಿಸಿದ್ದಾರೆ. 
ದೆಹಲಿ ವಿಶೇಷ ಪೊಲೀಸ್ ರಚನಾ ಕಾಯ್ದೆ 1946 ರ ವಿನಾಯಿತಿ ಅಡಿಯಲ್ಲಿ ಕಳೆದ ವರ್ಷ ನವೆಂಬರ್ 8 ರಂದು ಹೊರಡಿಸಲಾದ ಸರ್ಕಾರದ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಆಂಧ್ರ ಪ್ರದೇಶದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಲು ಸಿಬಿಐಗೆ ಎಲ್ಲಾ ರೀತಿಯ ಅಧಿಕಾರ ಸಿಕ್ಕಂತಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com