ಕಾಶ್ಮೀರವನ್ನು ಮುಸ್ಲಿಮರಿಗೆ ಗಿಫ್ಟ್ ಆಗಿ ಕೊಡಲ್ಲ: ಶಿವಸೇನಾ

ಸಂವಿಧಾನದ 370 ವಿಧಿ ರದ್ದುಪಡಿಸುವ ನಿಲುವನ್ನು ಪುನರ್ ಉಚ್ಚರಿಸಿರುವ ಶಿವೇಸೇನೆ, ಕಾಶ್ಮೀರವನ್ನು ಮುಸ್ಲಿಂರಿಗೆ ಗಿಫ್ಟ್ ಆಗಿ ನೀಡುವುದಿಲ್ಲ ಎಂದು ಹೇಳಿದೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
ಮುಂಬೈ: ಸಂವಿಧಾನದ 370 ವಿಧಿ ರದ್ದುಪಡಿಸುವ ನಿಲುವನ್ನು ಪುನರ್ ಉಚ್ಚರಿಸಿರುವ ಶಿವೇಸೇನೆ, ಕಾಶ್ಮೀರವನ್ನು ಮುಸ್ಲಿಂರಿಗೆ ಗಿಫ್ಟ್ ಆಗಿ ನೀಡುವುದಿಲ್ಲ ಎಂದು ಹೇಳಿದೆ. 
ಜಮ್ಮು- ಕಾಶ್ಮೀರದಲ್ಲಿ ಶೇ, 68.35 ರಷ್ಟು ಜನರು ಮುಸ್ಲಿಂರಿದ್ದರೆ, ಶೇ.28. 45 ರಷ್ಟು ಮಂದಿ ಹಿಂದೂಗಳಿದ್ದಾರೆ. ಹಾಗಂತ ಕಾಶ್ಮೀರವನ್ನು ಮುಸ್ಲಿಂರಿಗೆ ಗಿಫ್ಟ್ ಆಗಿ ನೀಡುವುದಿಲ್ಲ. ಅವರು ಕೂಡಾ ಭಾರತೀಯರು . 370 ನೇ ವಿಧಿಯನ್ನು ರದ್ದುಗೊಳಿಸಿ ದೇಶದಲ್ಲಿರುವ ಕಾನೂನನ್ನು ಅಲ್ಲಿಗೂ ವಿಸ್ತರಿಸಬೇಕೆಂದು ಶಿವಸೇನಾ ಮುಖವಾಣಿ ಸಾಮ್ಲಾದಲ್ಲಿ ಹೇಳಲಾಗಿದೆ.
ಸಂವಿಧಾನ 370ನೇ ವಿಧಿ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದೆ. ಅಲ್ಲಿನ ಆಡಳಿತದಲ್ಲಿ  ಪ್ರತ್ಯೇಕ ಕಾನೂನು ಜಾರಿಯಲ್ಲಿದ್ದು, ಜಮ್ಮು-ಕಾಶ್ಮೀರದಲ್ಲಿ ಸಂವಿಧಾನ ರದ್ದುಗೊಳಿಸುವ ನಿಟ್ಟಿನಲ್ಲಿ ಅಮಿತ್  ಶಾ ಕೈಗೊಂಡಿರುವ ಕ್ರಮಗಳನ್ನು  ಶ್ಲಾಘಿಸಲಾಗಿದೆ.
ಜಮ್ಮು ಕಾಶ್ಮೀರ ರದ್ದಿನ ವಿಚಾರಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಜೂನ್ 4 ರಂದು ಜಮ್ಮು- ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್, ಗುಪ್ತಚರ ಇಲಾಖೆ ನಿರ್ದೇಶಕ ರಾಜೀವ್ ಜೈನ್ ಮತ್ತು  ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದ್ದರು. 
ಜಮ್ಮು ಕಾಶ್ಮೀರ ಸಂವಿಧಾನ ರದ್ದುಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ, ಆದರೆ, ಆ ನಿಟ್ಟಿನಲ್ಲಿ ಅಮಿತ್ ಮುಂದಾಗಿರುವುದು ಉತ್ತಮವಾಗಿದೆ ಎಂದು ಸಾಮ್ನಾದಲ್ಲಿ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com