ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಆಸ್ಪತ್ರೆಗೆ ದಾಖಲು, ಮಾಲೇಗಾಂವ್ ಸ್ಫೋಟ ವಿಚಾರಣೆಗೆ ಗೈರು ಸಾಧ್ಯತೆ

ಭೋಪಾಲ್ ನೂತನ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿ, ಗುರುವಾರ ಬೆಳಗಿನ ಜಾವ ಡಿಸ್ಚಾರ್ಜ್...

Published: 06th June 2019 12:00 PM  |   Last Updated: 06th June 2019 03:22 AM   |  A+A-


Newly-elected Bhopal MP Pragya Thakur hospitalised, likely to miss Malegaon blast hearing

ಪ್ರಗ್ಯಾ ಠಾಕೂರ್

Posted By : LSB LSB
Source : PTI
ಭೋಪಾಲ್: ಭೋಪಾಲ್ ನೂತನ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿ, ಗುರುವಾರ ಬೆಳಗಿನ ಜಾವ ಡಿಸ್ಚಾರ್ಜ್ ಆಗಿದ್ದಾರೆ.

ಮಾಲೇಗಾವ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಗ್ಯಾ ಸಿಂಗ್ ಅವರಿಗೆ ಈ ವಾರ ವಿಚಾರಣೆಗೆ ಹಾಜರಾಗುವಂತೆ ಮುಂಬೈ ವಿಶೇಷ ಕೋರ್ಟ್ ಸೂಚಿಸಿದೆ. ಇದರ ಬೆನ್ನಲ್ಲೇ ಬುಧವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರಗ್ಯಾ ಸಿಂಗ್, ಇಂದು ಬೆಳಗ್ಗೆ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪ್ರಗ್ಯಾ ಸಿಂಗ್ ತೆರಳಿದ್ದು, ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಅವರ ಆಪ್ತ ಉಪ್ಮಾ ಅವರು ಪಿಟಿಐಗೆ ತಿಳಿಸಿದ್ದಾರೆ.

ಕಳೆದ ಸೋಮವಾರ ಎನ್ಐಎ ವಿಶೇಷ ಕೋರ್ಟ್ ನ್ಯಾಯಾಧೀಶ ವಿಎಸ್ ಪಡಲ್ಕರ್ ಅವರು ವಿಚಾರಣೆಗೆ ವಿನಾಯ್ತಿ ಕೋರಿ ಪ್ರಗ್ಯಾ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದರು. ಅಲ್ಲದೆ ಈ ಹಂತದಲ್ಲಿ ವಿಚಾರಣೆಗೆ ನಿಮ್ಮ ಖುದ್ದು ಹಾಜರಾತಿಯ ಅಗತ್ಯ ಇದೆ ಎಂದು ಹೇಳಿದ್ದರು.

ಈ ಮಧ್ಯ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿರುವ ಆರೋಪಿ ಪ್ರಗ್ಯಾ ಸಿಂಗ್ ಮತ್ತೆ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಆವರ ಆಪ್ತೆ ತಿಳಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp