ಪಂಜಾಬ್: ಮುಖ್ಯಮಂತ್ರಿ ಜೊತೆಗೆ ಮುಸುಕಿನ ಗುದ್ದಾಟ, ಸಿಧು ಕೈ ತಪ್ಪಿದ ಪ್ರಮುಖ ಖಾತೆ

ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಜೊತೆಗಿನ ಮುಸುಕಿನ ಗುದ್ದಾಟದಿಂದಾಗಿ ನವಜೋತ್ ಸಿಂಗ್ ಸಿಧು ಅವರ ಬಳಿಯಿದ್ದ ಸ್ಥಳೀಯ ಸರ್ಕಾರದ ಇಲಾಖೆ ಖಾತೆಯನ್ನು ಕಿತ್ತುಕೊಂಡು ಇಂಧನ ಖಾತೆಯನ್ನು ನೀಡಲಾಗಿದೆ.

Published: 06th June 2019 12:00 PM  |   Last Updated: 06th June 2019 10:21 AM   |  A+A-


Navjot singh sidhu

ನವಜೋತ್ ಸಿಂಗ್ ಸಿಧು

Posted By : ABN ABN
Source : PTI
ಚಂಡೀಗಡ: ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಜೊತೆಗಿನ ಮುಸುಕಿನ ಗುದ್ದಾಟದಿಂದಾಗಿ  ನವಜೋತ್ ಸಿಂಗ್  ಸಿಧು ಅವರ ಬಳಿಯಿದ್ದ ಸ್ಥಳೀಯ ಸರ್ಕಾರದ ಇಲಾಖೆ ಖಾತೆಯನ್ನು ಕಿತ್ತುಕೊಂಡು  ಇಂಧನ ಖಾತೆಯನ್ನು ನೀಡಲಾಗಿದೆ.

ಲೋಕಸಭಾ ಚುನಾವಣೆ ಮುಗಿದ ನಂತರ ನಡೆದ ಮೊದಲ ರಾಜ್ಯ ಸಂಪುಟ ಸಭೆ ಆದ ಕೆಲ ತಾಸುಗಳಲ್ಲಿಯೇ ಸಂಪುಟ ಪುನರ್ ರಚನೆ ಮಾಡಲಾಗಿದ್ದು, ಅಮರೀಂದರ್ ಸಿಂಗ್ ಬಹುತೇಕ ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.

ಸಿಧು ಅವರಿಂದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ವ್ಯವಹಾರಗಳ ಖಾತೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. 

ನಾಲ್ವರು ಮಂತ್ರಿಗಳನ್ನು ಹೊರತುಪಡಿಸಿ, ಇನ್ನಿತರ ಹಲವು ಖಾತೆಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಹೊಸ ಜವಾಬ್ದಾರಿ ವಹಿಸಲಾಗಿದೆ.

ಸಂಟುಪ ಪುನರ್ ರಚನೆಯಿಂದಾಗಿ  ಆಡಳಿತದಲ್ಲಿ ಪ್ರಾಮಾಣಿಕತೆ ಹಾಗೂ ದಕ್ಷತೆ ಹೆಚ್ಚಲು ಹಾಗೂ ಸರ್ಕಾರ ಸುಗಮವಾಗಿ ಸಾಗಲು ನೆರವಾಗಲಿದೆ ಎಂದು ಮುಖ್ಯಮಂತ್ರಿ ಕ್ಯಾಪ್ಟನ್  ಅಮರೀಂದರ್ ಸಿಂಗ್ ತಿಳಿಸಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp