ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಿಸಿಲ ಬೇಗೆಗೆ ತತ್ತರಿಸಿದ ರಾಜಸ್ತಾನ; ಚುರುವಿನಲ್ಲಿ 50.3 ಡಿಗ್ರಿ ಉಷ್ಣಾಂಷ, ವೈದ್ಯರ ರಜೆ ರದ್ದು!

ಕಳೆದ 2 ತಿಂಗಳಿನಿಂದ ರಾಜಸ್ತಾನದಲ್ಲಿ ಬಿಸಿಲ ಆರ್ಭಟ ಹೆಚ್ಚಾಗಿದ್ದು, ಇಲ್ಲಿನ ಚುರುವಿನಲ್ಲಿ ತಾಪಮಾನ ಮತ್ತೆ 50 ಡಿಗ್ರಿ ದಾಟುವ ಮೂಲಕ ಸುದ್ದಿಗೆ ಗ್ರಾಸವಾಗಿದೆ.
ಜೈಪುರ: ಕಳೆದ 2 ತಿಂಗಳಿನಿಂದ ರಾಜಸ್ತಾನದಲ್ಲಿ ಬಿಸಿಲ ಆರ್ಭಟ ಹೆಚ್ಚಾಗಿದ್ದು, ಇಲ್ಲಿನ ಚುರುವಿನಲ್ಲಿ ತಾಪಮಾನ ಮತ್ತೆ 50 ಡಿಗ್ರಿ ದಾಟುವ ಮೂಲಕ ಸುದ್ದಿಗೆ ಗ್ರಾಸವಾಗಿದೆ.
ಇದೇ ಜೂನ್ 2ರಂದು ಇಲ್ಲಿ ತಾಪಮಾನ 50.8 ಡಿಗ್ರಿ ಸೆಲ್ಸಿಯಸ್​ಗೆ ಏರಿಕೆಯಾಗಿತ್ತು. ಇದೀಗ ಮತ್ತೆ 50 ಡಿಗ್ರಿಗೆ ತಲುಪುವ ಮೂಲಕ ಒಂದೇ ತಿಂಗಳಲ್ಲಿ 2 ಬಾರಿ ಚುರುವಿನಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟಿದೆ.  ಈ ಹಿಂದೆ ಅಂದರೆ 2016ರ ಮೇ 19ರಂದು ಚುರುನಲ್ಲಿ ಶನಿವಾರ 50.2 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಆದರೆ ಜೂನ್ 2ರಂದು ಅದನ್ನೂ ಮೀರಿದ ಉಷ್ಣಾಂಶ ದಾಖಲಾಗಿತ್ತು.
ರಾಜಸ್ಥಾನದಲ್ಲಿ ತಾಪಮಾನ ತೀವ್ರ ಪ್ರಮಾಣದಲ್ಲಿರುವುದರಿಂದ ರಾಜಸ್ತಾನದ ಸರ್ಕಾರಿ ವೈದ್ಯರ ರಜೆಗಳನ್ನು ರದ್ದುಗೊಳಿಸಲಾಗಿದ್ದು, ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಚುರು ಜಿಲ್ಲಾಸ್ಪತ್ರೆ ಮುಖ್ಯಾಧಿಕಾರಿ ಡಾ. ಗೋಗಾ ರಾಮ್ ಅವರು ನಿರ್ದೇಶನ ನೀಡಿದ್ದು, ಆಸ್ಪತ್ರೆಯಲ್ಲಿ ದಿನೇ ದಿನೇ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ವೈದ್ಯರ ಮತ್ತು ಸಿಬ್ಬಂದಿಗಳ ರಜೆ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಜಸ್ತಾನ ಮಾತ್ರವಲ್ಲದೇ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ ಗರಿಷ್ಠ ಪ್ರಮಾಣ ತಲುಪಿದ್ದು, ಮದ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲೂ ಗರಿಷ್ಟ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com