ಅನಾರೋಗ್ಯಪೀಡಿತ ಬಾಲಕನನ್ನು 8 ಕಿಮೀ ಹೊತ್ತೊಯ್ದು ಚಿಕಿತ್ಸೆ: ಯೋಧರ ಮಾನವೀಯತೆಗೆ ನೆಟ್ಟಿಗರಿಂದ ಪ್ರಶಂಸೆ

ತೀವ್ರ ಅನಾರೋಗ್ಯ ಪಿಡಿತನಾಗಿದ್ದ ಬಾಲಕನೊಬ್ಬನನ್ನು ಸಿಆರ್ ಪಿಎಫ್ ಯೋಧರು ಎಂಟು ಕಿಮೀ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.
ಅನಾರೋಗ್ಯಪೀಡಿತ ಬಾಲಕನನ್ನು 8 ಕಿಮೀ ಹೊತ್ತೊಯ್ದು ಚಿಕಿತ್ಸೆ: ಯೋಧರ ಮಾನವೀಯತೆಗೆ ನೆಟ್ಟಿಗರಿಂದ ಪ್ರಶಂಸೆ
ಅನಾರೋಗ್ಯಪೀಡಿತ ಬಾಲಕನನ್ನು 8 ಕಿಮೀ ಹೊತ್ತೊಯ್ದು ಚಿಕಿತ್ಸೆ: ಯೋಧರ ಮಾನವೀಯತೆಗೆ ನೆಟ್ಟಿಗರಿಂದ ಪ್ರಶಂಸೆ
ಸುಕ್ಕಾ: ತೀವ್ರ ಅನಾರೋಗ್ಯ ಪಿಡಿತನಾಗಿದ್ದ ಬಾಲಕನೊಬ್ಬನನ್ನು ಸಿಆರ್ ಪಿಎಫ್ ಯೋಧರು ಎಂಟು ಕಿಮೀ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.
ಛತ್ತೀಸ್ ಘಡದ ನಕ್ಸಲ್ ಪೀಡಿತ ಪ್ರದೇಶ ದಾಂತೇವಾಡ ಪ್ರದೇಶದಲ್ಲಿರುವ ಗುಮೋದಿ ಗ್ರಾಮದ 13 ವರ್ಷದ ಬಾಲಕನಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿದ್ದು ಹತ್ತಿರದೆಲ್ಲೆಲ್ಲೂ ಚಿಕಿತ್ಸೆಯ ವ್ಯವಸ್ಥೆ ಇರಲಿಲ್ಲ.  ಆಗ ಅಲ್ಲೇ ಗಸ್ತು ತಿರುಗುತ್ತಿದ್ದ ಸಿಆರ್‌ಪಿಎಫ್ 231 ಬೆಟಾಲಿಯನ್ ಪಡೆಯ ಯೋಧರು ತಾವು ಬಾಲಕನನ್ನು ಹೊಇತ್ತೊಯ್ದು ಸೇನಾ ಕ್ಯಾಂಪ್ ನಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಮೊದಲಿಗೆ ಬಾಲಕ ಮಲಗಿದ್ದ ಮಂಚವನ್ನು ಹಗ್ಗದ ಸಹಾಯದಿಂದ ಉದ್ದದ ಕಟ್ಟಿಗೆಗೆ ಕಟ್ಟಿ ಬಳಿಕ ಇಬ್ಬರು ಯೋಧರು ಅದನ್ನು ಹೆಗಲ ಮೇಲೆ ಹೊತ್ತು ಸೇನಾ ಕ್ಯಾಂಪ್ ಗೆ ಸಾಗ್ಗಿಸಿದ್ದಾರೆ. ಗ್ರಾಮದಿಂದ ಎಂಟು ಕಿಮೀ ದೂರದಲ್ಲಿದ್ದ ಕ್ಯಾಂ ವರೆಗೆ ಯೋಧರು ಬಾಲಕನನ್ನು ಹೊತ್ತು ಸಾಗಿದ್ದು  ಅವರ ಹಿಂದೆ ಬಾಲಕನ ಕುಟುಂಬ, ಸ್ನೇಹಿತರೂ ಆಗಮಿಸಿದ್ದಾರೆ. 
ಬಾ;ಲಕನಿಗೆ ಕಾಮಾಲೆ ರೋಗ ಕಾಣಿಸಿಕೊಂಡಿದ್ದು ಅಗತ್ಯ ಸಮಯದಲ್ಲಿ ಚಿಕಿತ್ಸೆ ದೊರಕಿದ ಕಾರಣ ಈಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಯೋಧರು ಬಾಲಕನನ್ನು ಹೊತ್ತೊಯ್ಯುತ್ತಿರುವ ವೀಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿದ್ದು ಸಾಕ್ಷ್ಟು ಪ್ರಶಂಸೆಗೆ ಪಾತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com