ಮಾಲೇಗಾಂವ್ ಬಾಂಬ್ ಸ್ಫೋಟ ಬಗ್ಗೆ ಗೊತ್ತಿಲ್ಲ: ಎನ್ ಐಎ ನ್ಯಾಯಾಲಯದ ಮುಂದೆ ಸಾದ್ವಿ ಪ್ರಜ್ಞಾ ಹೇಳಿಕೆ

ಮಾಲೇಗಾಂವ್ ಬಾಂಬ್ ಸ್ಫೋಟದ ಬಗ್ಗೆ ಗೊತ್ತಿಲ್ಲ ಎಂದು ಈ ಪ್ರಕರಣದ ಆರೋಪಿ ಹಾಗೂ ನೂತನ ಬಿಜೆಪಿ ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಎನ್ ಐಎ ವಿಶೇಷ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಸಾದ್ವಿ  ಪ್ರಜ್ಞಾ ಸಿಂಗ್ ಠಾಕೂರ್
ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್
ಮುಂಬೈ: ಮಾಲೇಗಾಂವ್ ಬಾಂಬ್ ಸ್ಫೋಟದ ಬಗ್ಗೆ ಗೊತ್ತಿಲ್ಲ ಎಂದು ಈ ಪ್ರಕರಣದ ಆರೋಪಿ ಹಾಗೂ ನೂತನ ಬಿಜೆಪಿ ಸಂಸದೆ ಸಾದ್ವಿ  ಪ್ರಜ್ಞಾ ಸಿಂಗ್ ಠಾಕೂರ್ ಎನ್ ಐಎ ವಿಶೇಷ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಮಾಲೇಗಾಂವ್  ಬಾಂಬ್  ಸ್ಫೋಟ ಪ್ರಕರಣಕ್ಕೆ ಕುರಿತಂತೆ ಇಂದು ಎನ್ ಐಎ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿ. ಎಸ್. ಪಾದಲ್ಕರ್ ಮುಂದೆ ಹಾಜರಾದ ಪ್ರಜ್ಞಾ ಸಿಂಗ್ ಠಾಕೂರ್,  ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ್ದಾರೆ.
11 ವರ್ಷ ಹಳೆಯದಾದ ಪ್ರಕರಣದ ವಿಚಾರಣೆಗಾಗಿ ಲೋಕಸಭಾ ಸಂಸದೆಯಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್  ಎನ್ಐಎ ನ್ಯಾಯಾಲಯದ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ವಾರಕ್ಕೆ ಒಂದು ಬಾರಿಯಾದರೂ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಪ್ರಜ್ಞಾ ಸಿಂಗ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ವಿಶೇಷ ಎನ್ ಐಎ ನ್ಯಾಯಾಧೀಶ ವಿಎಸ್ ಪಾದಲ್ಕರ್ ಕಳೆದ ತಿಂಗಳು ನಿರ್ದೇಶನ ನೀಡಿದ್ದರು. ಸಾಂದರ್ಭಿಕ ಕಾರಣ  ನೀಡಿದ ನಂತರ ನ್ಯಾಯಾಲಯದ ವಿಚಾರಣೆಯಿಂದ ವಿನಾಯಿತಿ ನೀಡುವುದಾಗಿ ನ್ಯಾಯಾಧೀಶರು ಹೇಳಿಕೆ ನೀಡಿದ್ದರು.
ಈ ವಾರ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುವುದರಿಂದ ವಿನಾಯಿತಿ ನೀಡುವಂತೆ ಪ್ರಜ್ಞಾ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ  ಕಳೆದ ಸೋಮವಾರ ವಜಾಗೊಳಿಸಿತ್ತು.
 ಪ್ರಜ್ಞಾಸಿಂಗ್ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು,ಭೂಪಾಲ್ ನಿಂದ ಮುಂಬೈಗೆ ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದು ಆಕೆಯ ಪರ ವಕೀಲ ಪ್ರಶಾಂತ್ ಮ್ಯಾಗೋ ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಒಂದು ದಿನದ  ಮಟ್ಟಿಗೆ ವಿನಾಯಿತಿ ನೀಡಿದ ನ್ಯಾಯಾಲಯ ಇಂದು  ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. 
2008 ಸೆಪ್ಟೆಂಬರ್ 29 ರಂದು ಮಹಾರಾಷ್ಟ್ರದ ಮಾಲೇಗಾಂವ್ ಮಸೀದಿ ಸಂಭವಿಸಿದ್ದ ಬಾಂಬ್ ಸ್ಪೋಟದಲ್ಲಿ 6 ಮಂದಿ ಮೃತಪಟ್ಟು 100 ಮಂದಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com