ವಾಯುಪಡೆ ವಿಮಾನ ನಾಪತ್ತೆ; ಶೋಧಕಾರ್ಯ ತೀವ್ರ, ಕಾರ್ಯಾಚರಣೆಗೆ P-8I ನೌಕಾ ವಿಚಕ್ಷಣ ವಿಮಾನ ನಿಯೋಜನೆ

ಭಾರತೀಯ ವಾಯುಪಡೆಯ ಎಎನ್‌–32 ವಿಮಾನ ನಾಪತ್ತೆಯಾಗಿ ನಾಲ್ಕು ದಿನ ಕಳೆದಿದ್ದು, ವಿಮಾನದ ಪತ್ತೆಗಾಗಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತೀಯ ವಾಯುಪಡೆಯ ಎಎನ್‌–32 ವಿಮಾನ ನಾಪತ್ತೆಯಾಗಿ ನಾಲ್ಕು ದಿನ ಕಳೆದಿದ್ದು, ವಿಮಾನದ ಪತ್ತೆಗಾಗಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಇದೀಗ ಶೋಧ ಕಾರ್ಯಾತಚರಣೆ ಸತತ ಐದನೇ ದಿನಕ್ಕೆ ಕಾಲಿಟ್ಟಿದ್ದು, ಕಾರ್ಯಾಚರಣೆಗೆ ಇದೀಗ ನೌಕಾದಳದ ಐಎನ್ ಎಸ್ ರಾಜಾಲಿ ಮತ್ತು ಅದರ P-8I ನೌಕಾ ವಿಚಕ್ಷಣ ವಿಮಾನವನ್ನು ಕೂಡ ನಿಯೋಜನೆ ಮಾಡಲಾಗಿದೆ. ಈಗಾಗಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಉಪಗ್ರಹಗಳ ಮೂಲಕ ವಿಮಾನದ ಪತ್ತೆಗೆ ಯತ್ನಿಸುತ್ತಿದೆ. ಅಂತೆಯೇ ವಾಯುಪಡೆಯ ಹಲವು ಯುದ್ಧ ವಿಮಾನಗಳು ಹಾಗೂ ವಿಚಕ್ಷಣ ವಿಮಾನಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ.
ಇದೀಗ ಕಾರ್ಯಾಚರಣೆಗೆ ನೌಕಾದಳ ಕೂಡ ಕೈ ಜೋಡಿಸಿದ್ದು, ನೌಕಾದಳದ ಐಎನ್ ಎಸ್ ರಾಜಾಲಿ ಮತ್ತು ಅದರ P-8I ನೌಕಾ ವಿಚಕ್ಷಣ ವಿಮಾನ ಶೋಧ ಕಾರ್ಯಾಚರಣೆಗೆ ಧಾವಿಸಿವೆ.
ಕಾರ್ಯಾಚರಣೆಗೆ ಪ್ರತೀಕೂಲ ಹವಾಮಾನ ಅಡ್ಡಿ
ಇನ್ನು ನಾಪತ್ತೆಯಾಗಿರುವ ವಿಮಾನ ಶೋಧಕ್ಕೆ ಪ್ರತೀಕೂಲ ಹವಾಮಾನ ಅಡ್ಡಿಯಾಗಿದ್ದು, ಈ ಬಗ್ಗೆ ವಾಯುಸೇನೆ ಮಾಹಿತಿ ನೀಡಿದೆ. '100 ಗಂಟೆಗೂ ಹೆಚ್ಚು ಕಾಲ ಹುಡುಕಾಟ ನಡೆಸಿದ್ದೇವೆ. ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಪತ್ತೆಗಾಗಿ ಸಾಧ್ಯವಿರುವ ಎಲ್ಲಾ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಯುದ್ಧ ವಿಮಾನ, ಸಿ130, ಹೆಲಿಕಾಪ್ಟರ್ ಗಳು, ವಿಶೇಷ ಸೆನ್ಸಾರ್ ಗಳು, ಉಪಗ್ರಹ ನೆರವು ಹಾಗೂ ನಾಗರಿಕ, ಪೊಲೀಸ್‌ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಸೇರಿದಂತೆ ಅಗತ್ಯವಿರುವ ಎಲ್ಲಾ ನೆರವನ್ನು ಪಡೆದು ಹುಡುಕಾಟ ನಡೆಸಲಾಗುತ್ತಿದೆ. ಪ್ರತೀಕೂಲ ಹಮಾಮಾನದಿಂದ ಅಡ್ಡಿಯಾಗುತ್ತಿದೆ ಎಂದು ತಿಳಿಸಿದೆ.
ಕಾಣೆಯಾದ ವಿಮಾನದ ಪತ್ತೆ ಕಾರ್ಯದ ಯಾವ ಪ್ರಯತ್ನವನ್ನು ನಾವು ನಿಲ್ಲಿಸಿಲಲ್ಲ. ಶುಕ್ರವಾರ ಹವಾಮಾನ ಸ್ವಲ್ಪಮಟ್ಟಿಗೆ ಅನುಕೂಲಕರವಾಗಲಿದ್ದು, ಭಾರತೀಯ ನೌಕಾಪಡೆಯ ಪಿ8ಐ ವಿಮಾನ ಹುಡುಕಾಟ ಆರಂಭಿಸಲಿದೆ ಎಂದು ತಿಳಿಸಿದ್ದಾರೆ.
ವಿಮಾನ ಸೋಮವಾರ ಅಸ್ಸಾಂನ ಜೋರ್ಹಾಟ್‌ನಿಂದ ಅರುಣಾಚಲ ಪ್ರದೇಶದ ಮೆಚುಕಾದತ್ತ ಹೊರಟಿದ್ದಾಗ ನಾಪತ್ತೆಯಾಗಿದೆ. ಅಂದು ಮಧ್ಯಾಹ್ನ 12.25ಕ್ಕೆ ಜೋರ್ಹಾಟ್‌ ವಾಯುನೆಲೆಯಿಂದ ಹೊರಟಿದ್ದ ವಿಮಾನ 1 ಗಂಟೆಯ ಹೊತ್ತಿಗೆ ಸಂಪರ್ಕ ಕಳೆದುಕೊಂಡಿತ್ತು. ಭಾರತೀಯ ವಾಯಸೇನೆಯ 13 ಮಂದಿ ವಿಮಾನದಲ್ಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com