ಅತ್ಯಾಧುನಿಕ 100 ಸ್ಪೈಸ್ ಬಾಂಬ್ ಖರೀದಿಗೆ ಇಸ್ರೇಲ್ ಜೊತೆ ಒಪ್ಪಂದಕ್ಕೆ ಭಾರತ ಸಹಿ

ಎರಡವೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಆಡಳಿತ ಯಂತ್ರ ಮತ್ತಷ್ಟು ಚುರುಕು ಪಡೆದುಕೊಂಡಿದ್ದು, ಇಸ್ರೇಲ್ ಜೊತೆ ಭಾರತ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ.
ಅತ್ಯಾಧುನಿಕ 100 ಸ್ಪೈಸ್ ಬಾಂಬ್ ಖರೀದಿಗೆ ಇಸ್ರೇಲ್ ಜೊತೆ ಒಪ್ಪಂದಕ್ಕೆ ಭಾರತ ಸಹಿ
ಅತ್ಯಾಧುನಿಕ 100 ಸ್ಪೈಸ್ ಬಾಂಬ್ ಖರೀದಿಗೆ ಇಸ್ರೇಲ್ ಜೊತೆ ಒಪ್ಪಂದಕ್ಕೆ ಭಾರತ ಸಹಿ
ನವದೆಹಲಿ: ಎರಡವೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಆಡಳಿತ ಯಂತ್ರ ಮತ್ತಷ್ಟು ಚುರುಕು ಪಡೆದುಕೊಂಡಿದ್ದು, ಇಸ್ರೇಲ್ ಜೊತೆ ಭಾರತ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ. 
300 ಕೋಟಿ ರೂಪಾಯಿ ಮೊತ್ತದ ಅತ್ಯಾಧುನಿಕ ಸಿಡಿತಲೆಗಳ ಜೊತೆಗೆ 100 ಸ್ಪೈಸ್ ಬಾಂಬ್ ಗಳನ್ನು ಭಾರತೀಯ ವಾಯುಪಡೆಗೆ ಖರೀದಿಸಲು ಭಾರತ ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. 
ಪ್ರಧಾನಿ ನರೇಂದ್ರ ಮೋದಿ 2 ನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಸಹಿ ಹಾಕಲಾಗುತ್ತಿರುವ ಮೊದಲನೇ ರಕ್ಷಣಾ ಒಪ್ಪಂದ ಇದಾಗಿದೆ. 
ಪುಲ್ವಾಮ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನದಲ್ಲಿದ್ದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ನೆಲೆಗಳ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ಸ್ಪೈಸ್-2000 ಬಾಂಬ್ ಗಳನ್ನು ಬಳಕೆ ಮಾಡಲಾಗಿತ್ತು. ಈಗ ಇಸ್ರೇಲ್ ನಿಂದ ಖರೀದಿಸುತ್ತಿರುವ ಸ್ಪೈಸ್ ಬಾಂಬ್  ಸರ್ಜಿಕಲ್ ಸ್ಟ್ರೈಕ್ ನಲ್ಲಿ ಬಳಕೆ ಮಾಡಿದ್ದಕ್ಕಿಂತಲೂ ಅತ್ಯಾಧುನಿಕವಾಗಿದ್ದು, ಕ್ಷಣಮಾತ್ರದಲ್ಲಿ ಶತ್ರುಗಳ ಕಟ್ಟಡಗಳನ್ನು ಭಸ್ಮ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com