ವಾಯುಸೇನೆ ಬತ್ತಳಿಕೆ ಸೇರಲಿದೆ ಇಸ್ರೇಲ್ ನ ವಿಧ್ವಂಸಕ 'ಸ್ಪೈಸ್ 2000' ಬಾಂಬ್ ಗಳು

ಪಾಕಿಸ್ತಾನ ಬಾಲಾಕೋಟ್ ನಲ್ಲಿನ ಉಗ್ರ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ್ದಷ್ಟೇ ಅಲ್ಲದೇ ಹತ್ತಾರು ಉಗ್ರರ ಬಲಿ ಪಡೆದಿದ್ದ ಇಸ್ರೇಲ್ ನಿರ್ಮಿತ 'ಸ್ಪೈಸ್ 2000' ಬಾಂಬ್ ಗಳನ್ನು ಖರೀದಿ ಮಾಡಲು ಭಾರತೀಯ ವಾಯು ಸೇನೆ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಾಕಿಸ್ತಾನ ಬಾಲಾಕೋಟ್ ನಲ್ಲಿನ ಉಗ್ರ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ್ದಷ್ಟೇ ಅಲ್ಲದೇ ಹತ್ತಾರು ಉಗ್ರರ ಬಲಿ ಪಡೆದಿದ್ದ ಇಸ್ರೇಲ್ ನಿರ್ಮಿತ 'ಸ್ಪೈಸ್ 2000' ಬಾಂಬ್ ಗಳನ್ನು ಖರೀದಿ ಮಾಡಲು ಭಾರತೀಯ ವಾಯು ಸೇನೆ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ.
ಬಾಲಾಕೋಟ್ ಉಗ್ರ ಕ್ಯಾಂಪ್ ಧ್ವಂಸ ಮಾಡಿದ್ದ ಇಸ್ರೇಲ್ ನಿರ್ಮಿತ 'ವಿಧ್ವಂಸಕ ಬಂಕರ್ ಬಸ್ಟರ್''ಸ್ಪೈಸ್ 2000' ಬಾಂಬ್ ನ ಹೊಸ ಅವತರಣಿಕೆಯ ಬಾಂಬ್ ಗಳನ್ನು ಖರೀದಿ ಮಾಡಲು ಭಾರತೀಯ ವಾಯುಸೇನೆ ಮುಂದಾಗಿದ್ದು, ಈ ಸಂಬಂಧ ನಡೆದ ಚರ್ಚೆಯಲ್ಲಿ ಸುಮಾರು 100 ಸ್ಪೈಸ್ ಬಾಂಬ್ ಗಳನ್ನು ಖರೀದಿ ಮಾಡಲು ಸೇನೆ ಅನುಮೋದನೆ ನೀಡಿದೆ ಎನ್ನಲಾಗಿದೆ. ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಕೇಂದ್ರ ಸರ್ಕಾರ ಸೇನೆಯ ಮೂರು ದಳಗಳಿಗೂ ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ತಲಾ 300 ಕೋಟಿ ರೂ ಗಳನ್ನು ಮೀಸಲಿರಿಸಿದೆ.
ಈ ಪೈಕಿ ವಾಯುಸೇನೆ ತನ್ನ ಪಾಲಿನ 300 ಕೂಟಿ ರೂಗಳ ಹಣದಲ್ಲಿ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಸರಣಿಯ ಹೊಸ ಅವತರಣಿಕೆಗಳನ್ನು ಖರೀದಿ ಮಾಡಲು ಈ ಹಿಂದೆಯೇ ನಿರ್ಧರಿಸಿತ್ತು. ಇದೀಗ ಈ ಖರೀದಿ ಅಧಿಕೃತವಾಗಿದ್ದು, ವಾಯುಸೇನೆ ಸ್ಪೈಸ್ 2000 ಮಾರ್ಕ್ 84 ಸರಣಿಯ ಸುಮಾರು 100 ಬಾಂಬ್ ಗಳನ್ನು ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಈಗಾಗಲೇ ಭಾರತೀಯ ವಾಯುಸೇನೆ ಬಳಿ ಎಂಕೆ-84, ಬಿಎಲ್ ಯು 109, ಎಪಿಡಬಲ್ಯೂ ಮತ್ತು ಆರ್ ಎಪಿ 2000 ಸರಣಿ ಬಾಂಬ್ ಗಳಿದ್ದು, ಈ ಪಟ್ಟಿಗೆ ಇದೀಗ ಸ್ಪೈಸ್ 2000 ಮಾರ್ಕ್ 84 ಸರಣಿಯ ಬಾಂಬ್ ಗಳೂ ಕೂಡ ಸೇರ್ಪಡೆಯಾಗಲಿವೆ. 
ಬಂಕರ್ ಬಸ್ಟರ್: ಸ್ಪೈಸ್ 2000 ವಿಶೇಷತೆ
ಇನ್ನು ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳನ್ನು ಬಂಕರ್ ಬಸ್ಟರ್ ಎಂದೇ ಕರೆಯಲಾಗುತ್ತದೆ. ಶತ್ರುಪಾಳಯದ ಬಂಕರ್ ಗಳು ಎಷ್ಟೇ ಸುರಕ್ಷಿತವಾಗಿದ್ದರೂ ಅವುಗಳನ್ನು ಛಿದ್ರಗೊಳಿಸುವ ಸಾಮರ್ಥ್ಯ ಈ ಬಾಂಬ್ ಗಳಿಗಿದೆ. ಅಲ್ಲದೆ ಎಷ್ಟೇ ಬಲಿಷ್ಟ ಕಟ್ಟಡಗಳಾದರೂ ಕ್ಷಣಮಾತ್ರದಲ್ಲಿ ಸ್ಫೋಟಿಸಿ ಧರೆಗುರುಳಿಸುತ್ತದೆ. ಅಲ್ಲದೆ ಈ ಸ್ಪೈಸ್ 2000 ಬಾಂಬ್ ಗಳು ಲೇಸರ್ ಗೈಡೆಡ್ ಬಾಂಬ್ ಗಳಾಗಿದ್ದು, ಗುರಿಗಳನ್ನು ನಿಗದಿ ಪಡಿಸಿ ಉಡಾವಣೆ ಮಾಡಿದರೆ ಸಾಕು ಎಂತಹುದೇ ಪರಿಸ್ಥಿತಿಯಲ್ಲೂ ಗುರಿಗಳನ್ನು ನಿಖರವಾಗಿ ಬೇದಿಸುವ ಸಾಮರ್ಥ್ಯವನ್ನು ಈ ಬಾಂಬ್ ಗಳು ಹೊಂದಿವೆ.
ಈ ಹಿಂದೆ ಪುಲ್ವಾಮದಲ್ಲಿ ಸೇನಾಪಡೆಗಳ ವಾಹನಗಳ ಮೇಲೆ ಉಗ್ರರು ನಡೆಸಿದ್ದ ಭೀಕರ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 44 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಭಾರತೀಯ ವಾಯುಸೇನೆ ಬಾಲಾಕೋಟ್ ನಲ್ಲಿದ್ದ ಜೈಶ್ ಇ ಮೊಹಮದ್ ಉಗ್ರ ಕ್ಯಾಂಪ್ ಗಳ ಮೇಲೆ ವಾಯು ದಾಳಿ ನಡೆಸಿತ್ತು. ಈ ವೇಳೆ ಮಿರಾಜ್ 2000 ಯುದ್ಧ ವಿಮಾನಕ್ಕೆ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳನ್ನು ಅಳವಡಿಸಿ ದಾಳಿ ನಡೆಸಲಾಗಿತ್ತು. ಸ್ಪೈಸ್ 2000 ಬಾಂಬ್ ಗಳು ಬಾಲಾಕೋಟ್ ನಲ್ಲಿದ್ದ ಜೆಇಎಂ ಉಗ್ರ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com