ಕೇರಳ: ವೈನಾಡಿನ ಜನರ ಸಂಪರ್ಕಕ್ಕೆ ಸುಲಭವಾಗಿ ಸಿಗುತ್ತೇನೆ- ರಾಹುಲ್ ಗಾಂಧಿ

ಸಂಸದರಾದ ಬಳಿಕ ಇದೇ ಮೊದಲ ಬಾರಿಗೆ ಸ್ವಕ್ಷೇತ್ರ ಕೇರಳದ ವೈನಾಡಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ವೈನಾಡು ಮಾತ್ರವಲ್ಲದೇ ಕೇರಳ ಜನರ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತುವುದಾಗಿ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಮಲ್ಲಾಪುರಂ: ಸಂಸದರಾದ ಬಳಿಕ ಇದೇ ಮೊದಲ ಬಾರಿಗೆ ಸ್ವಕ್ಷೇತ್ರ ಕೇರಳದ ವೈನಾಡಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ,  ವೈನಾಡು ಮಾತ್ರವಲ್ಲದೇ  ಕೇರಳ ಜನರ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ  ಧ್ವನಿ ಎತ್ತುವುದಾಗಿ ಹೇಳಿದ್ದಾರೆ.
ಕಾಲಿಕಾವೂನಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಅಭೂತಪೂರ್ವಕ ರೀತಿಯಲ್ಲಿ ಬೆಂಬಲಿಸಿದ್ದು, ವೈನಾಡಿನ ಪ್ರತಿಯೊಬ್ಬ ನಾಗರಿಕರ ಸಂಪರ್ಕಕ್ಕೂ ಸಿಗುವುದಾಗಿ ತಿಳಿಸಿದರು.
ಕೇರಳದ ಸಂಸದನಾಗಿ ವೈನಾಡು ಮಾತ್ರವಲ್ಲ , ಕೇರಳ ಜನರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದು ತಮ್ಮ ಜವಾಬ್ದಾರಿಯಾಗಿದೆ .ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ನಿಮ್ಮ ಜೀವನಮಟ್ಟ ಸುಧಾರಿಸಲು ಪ್ರಯತ್ನಿಸುವುದಾಗಿ ಹೇಳಿದರು. 
ವೈನಾಡು ಜನರ ಸಮಸ್ಯೆಗಳನ್ನು ಕೇಳುವುದು ನನ್ನ ಕೆಲಸವಾಗಿದೆ. ವೈನಾಡು ಜನರ ಧ್ವನಿಯಾಗಿ ಮಾತನಾಡುತ್ತೇನೆ. ನಿಮ್ಮಗಳ ಪ್ರೀತಿಗೆ ಅಭಾರಿಯಾಗಿರುವುದಾಗಿ  ರಾಹುಲ್ ಗಾಂಧಿ ಧನ್ಯವಾದ ಆರ್ಪಿಸಿದರು.
ವಾಂದೂರು ವಿಧಾನಸಭಾ ಕ್ಷೇತ್ರದಲ್ಲಿ ತೆರೆದ ಜೀಪಿನಲ್ಲಿ ತೆರಳಿದ ರಾಹುಲ್ ಗಾಂಧಿ ಜೊತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು. 
ಲೋಕಸಭಾ ಚುನಾವಣೆಯಲ್ಲಿ ಆಮೇಥಿಯಲ್ಲಿ ಸೋಲು ಅನುಭವಿಸಿರುವ ರಾಹುಲ್ ಗಾಂಧಿ ವೈನಾಡು  ಕ್ಷೇತ್ರದಲ್ಲಿ ತಮ್ಮ ಸಮೀಪದ ಎಲ್ ಡಿಎಫ್ ಅಭ್ಯರ್ಥಿ ಪಿಪಿ ಸುನೀರ್ ವಿರುದ್ಧ 4 ಲಕ್ಷದ 31 ಸಾವಿರದ 063 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com