ಪರಮ ಪಾಪಿ ಕೃತ್ಯ: ಅಲಿಘರ್ ಬಾಲಕಿ ಹತ್ಯೆ ಆರೋಪಿಯಿಂದ ಸ್ವಂತ ಮಗಳ ಮೇಲೆ ಅತ್ಯಾಚಾರ!

ಉತ್ತರ ಪ್ರದೇಶದ ಅಲಿಘರ್ ನಲ್ಲಿ ಮೂರು ವರ್ಷದ ಬಾಲಕಿಯ ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳ ಪೈಕಿ ಒಬ್ಬ ಐದು ವರ್ಷಗಳ ಹಿಂದೆ ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾಗಿ ಪೋಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅಲಿಘರ್(ಉತ್ತರಪ್ರದೇಶ: ಉತ್ತರ ಪ್ರದೇಶದ ಅಲಿಘರ್ ನಲ್ಲಿ ಮೂರು ವರ್ಷದ ಬಾಲಕಿಯ ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳ ಪೈಕಿ ಒಬ್ಬ ಐದು ವರ್ಷಗಳ ಹಿಂದೆ ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾಗಿ ಪೋಲೀಸರು ಹೇಳಿದ್ದಾರೆ.
ಆರೋಪಿಯು ತನ್ನ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದುದರ ಬಗೆಗೆ 2014ರಲ್ಲಿ ಆಕೆಯ ಸಂಬಂಧಿಯೊಬ್ಬರು ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಅವನ ಬಂಧನವಾಗಿತ್ತು.ಆದರೆ ಕೆಲವು ತಿಂಗಳ ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದನೆಂದು ಪೋಲೀಸರು ವಿವರಿಸಿದ್ದಾರೆ.
ಆರೋಪಿಗಳ ವಿರುದ್ಧ  376 (ಅತ್ಯಾಚಾರ), 354 (ಮಹಿಳೆಯನ್ನು ಅತ್ಯಾಚಾರ ಮಾಡುವ ಉದ್ದೇಶದಿಂದ ಆಕ್ರಮಣ) ಮತ್ತು 363 (ಅಪಹರಣ) ಸೇರಿದಂತೆ ಐಪಿಸಿ ಸೆಕ್ಷನ್ ಗಳ ವಿವಿಧ ಕಲಂ ನಡಿ ಪ್ರಕರಣ ದಾಖಲಾಗಿದೆ.
ಅಲಿಘರ್ ಬಾಲಕಿಯ ಶವವು ಆಕೆಯ ಮನೆ ಸಮೀಪದ ಕಸ ಎಸೆಯುವ ಖಾಲಿ ಜಾಗದಲ್ಲಿ ಜೂನ್ 2ರಂದು ಪತ್ತೆಯಾಗಿತ್ತು. ಇದಕ್ಕೆ ಮೂರು ದಿನಗಳ ಹಿಂದಿನಿಂದ ಆಕೆ ಕಾಣೆಯಾಗಿದ್ದಳು. ವರದಿಗಳು ಹೇಳಿದಂತೆ ಅದಾಗಲೇ ಬಾಲಕಿಯ ದೇಹವು ಬೀದಿ ನಾಯಿಗಳಿಗೆ ಆಹಾರವಾಗಿದ್ದು ದೇಹದ ಕೆಲ ಭಾಗಗಳನ್ನು ನಾಯಿಗಳು ಕಚ್ಚಿ ತಿಂದು ಹಾಕಿದ್ದವು.
ಆರೊಪಿಗಳಾದ ಜಹೀದ್ ಹಾಗೂ ಅಸ್ಲಾಮ್ ಹತ್ಯೆಯಾದ ಬಾಲಕಿಯ ನೆರೆಮನೆಯವರಾಗಿದ್ದರು. ಎರಡೂ ಮನೆಗಳ ನಡುವೆ ಹಣಕಾಸಿನ ವ್ಯವಹಾರವಿದ್ದು ಹಣ್ ಸಾಲವಾಗಿ ಪಡೆದಿದ್ದು ವಾಪಾಸ್ ಈಡಬೇಕೆಂದು ಆಗ್ರಹಿಸಿದಾಗ ಮಾತಿಗೆ ಮಾತು ಬೆಳೆದಿದೆ. ಆಗ ಎರಡು ಕುಟುಂಬದ ನಡುವೆ ವೈಮನಸ್ಯ ಭುಗಿಲೆದ್ದಿದ್ದು ಬಾಲಕಿಯ ಹತ್ಯೆಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ.
"ಮೇ 31 ರಂದು ಅಪಹರಣ ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರು ವೈಯುಕ್ತಿಕ ದ್ವೇಷದ ಕಾರಣ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಾಲಕಿಯ ದೇಹದದ ಮೇಲೆ ಯಾವ ಅತ್ಯಾಚಾರವಾಗಿರುವ ಚಿಹ್ನೆಯಿಲ್ಲ, ಆರೋಪಿಗಳಿಗ ಜೈಲುಪಾಲಾಗಿದ್ದಾರೆ"ಹಿರಿಯ ಪೊಲೀಸ್ ಅಧೀಕ್ಷಕ ಹೇಳೀದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com