ಪ್ರಧಾನಿ ಮೋದಿಗೆ 37 ಬಾರಿ ಪತ್ರ ಬರೆದ 8ನೇ ತರಗತಿ ವಿದ್ಯಾರ್ಥಿ: ಪತ್ರ ಬರೆಯಲು ಕಾರಣವೇನು?

8ನೇ ತರಗತಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೋಬ್ಬರಿ 37 ಪತ್ರ ಬರೆದಿದ್ದಾನೆ....
37 ಬಾರಿ ಪತ್ರ ಬರೆದ ವಿದ್ಯಾರ್ಥಿ
37 ಬಾರಿ ಪತ್ರ ಬರೆದ ವಿದ್ಯಾರ್ಥಿ
ಕಾನ್ಪುರ: 8ನೇ ತರಗತಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಬರೋಬ್ಬರಿ 37 ಪತ್ರ ಬರೆದಿದ್ದಾನೆ.
ಸಾರ್ಥಕ್ ತ್ರಿಪಾಠಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ  ತಮ್ಮ ಮನೆಯ ಸಮಸ್ಯೆಗಳ ಬಗ್ಗೆ ಮಾತ್ರ ತಿಳಿಸಿದರೇ ತಮ್ಮ ತಂದೆಗೆ ಪುನ ಕೆಲಸ ನೀಡಬೇಕೆಂದು ಮನವಿ ಮಾಡಿದ್ದಾನೆ, ಉತ್ತರ ಪ್ರದೇಶ ಸ್ಟಾಕ್ ಎಕ್ಸೇಂಜ್ ನಲ್ಲಿ ಕೆಲಸ ವಾಪಸ್ ನೀಡಬೇಕು ಎಂದು ಬರೆದಿದ್ದಾನೆ.
2016 ರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ 36 ಬಾರಿ ಪತ್ರ ಬರೆದಿದ್ದಾನೆ, ಆದರೆ ಇದುವರೆಗೂ ಒಮ್ಮೆಯೂ ಪ್ರತಿಕ್ರಿಯೆ ಬಂದಿಲ್ಲ, 
ಪ್ರಧಾನಿ ಮೋಜದಿ ಅವರು ಎಲ್ಲರ ಸಮಸ್ಯೆಗಳನ್ನು ಆಲಿಸುತ್ತಾರೆ  ಎಂದು ಕೇಳಿದ್ದೇನೆ, ಹೀಗಾಗಿ ನನ್ನ ಸಮಸ್ಯೆ ಕೇಳಬೇಕು ಎಂದು ಆತ ಮನವಿ ಮಾಡಿದ್ದಾನೆ. ತಮ್ಮ ತಂದೆಗೆ ಪ್ರಧಾನಿ ಮೋದಿ ಸಹಾಯ ಮಾಡಬೇಕು ಎಂದು ಕೇಳಿದ್ದಾನೆ.
ಕೆಲವರ ಒತ್ತಾಯದ ಮೇರೆಗೆ ನನ್ನ ತಂದೆ ಕೆಲಸ ಬಿಟ್ಟಿದ್ದಾರೆ, ಹೀಗಾಗಿ ತನ್ನ ತಂದೆಗೆ ವಾಪಸ್ ಕೆಲಸ ಕೊಡಿಸಬೇಕು ಎಂದು ಮನವಿ ಮಾಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com