ಮೋದಿ ಚುನಾವಣಾ ಪ್ರಚಾರ ದ್ವೇಷದ ಮತ್ತು ವಿಷದ ಮಾತುಗಳಿಂದ ಕೂಡಿತ್ತು: ರಾಹುಲ್ ಗಾಂಧಿ

ನರೇಂದ್ರ ಮೋದಿ ಮತ್ತು ಬಿಜೆಪಿ ಚುನಾವಣಾ ಪ್ರಚಾರ ದ್ವೇಷ ಮತ್ತು ವಿಷದಿಂದ ಕೂಡಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ವಯನಾಡ್ ನಲ್ಲಿ ರಾಹುಲ್ ಗಾಂಧಿ
ವಯನಾಡ್ ನಲ್ಲಿ ರಾಹುಲ್ ಗಾಂಧಿ
ವಯನಾಡ್: ನರೇಂದ್ರ ಮೋದಿ ಮತ್ತು ಬಿಜೆಪಿ ಚುನಾವಣಾ ಪ್ರಚಾರ ದ್ವೇಷ ಮತ್ತು ವಿಷದಿಂದ ಕೂಡಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ 3 ದಿನಗಳ ಭೇಟಿಯಲ್ಲಿರುವ ರಾಹುಲ್ ಗಾಂಧಿ, ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ಕಿಡಿಕಾರಿದರು.
ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 'ನಾವು ರಾಷ್ಟ್ರಮಟ್ಟದಲ್ಲಿ ನಾವು ವಿಷದ ಜತೆ ಹೋರಾಡುತ್ತಿದ್ದೇವೆ. ಮಾನ್ಯ ನರೇಂದ್ರ ಮೋದಿ ಅವರೇ ಆ ವಿಷ. ಮೋದಿ ಅವರಿಗೆ ಸಂಬಂಧಿಸಿದಂತೆ 'ವಿಷ' ಎಂಬ ಕಠು ಪದವನ್ನು ನಾನು ಬಳಸುತ್ತೇನೆ. ಏಕೆಂದರೆ, ಈ ದೇಶವನ್ನು ವಿಭಜಿಸಲು ನರೇಂದ್ರ ಮೊದಿ ಅವರು ದ್ವೇಷದ ವಿಷವನ್ನು ಬಿತ್ತುತ್ತಿದ್ದಾರೆ. ದೇಶದ ಜನರನ್ನು ವಿಭಜಿಸಲು ಕೋಪ ಮತ್ತು ದ್ವೇಷವನ್ನು ಬಳಸುತ್ತಾರೆ. ಚುನಾವಣೆಯಲ್ಲೂ ಕೂಡ ಗೆಲ್ಲಲು ಸುಳ್ಳುನ್ನು ಬಳಸಿದರು. ಅಲ್ಲದೆ ಅವರ ಪ್ರಚಾರದ ತುಂಬ ದ್ವೇಷ ಮತ್ತು ವಿಷ ತುಂಬಿತ್ತು ಎಂದು ಹೇಳಿದರು.
ಅಂತೆಯೇ 'ಮೋದಿ ಕೆಟ್ಟ ಭಾವನೆಗಳ, ಕೆಟ್ಟ ಕೋಪದ, ದ್ವೇಷದ, ಅಸಹಿಷ್ಣುತೆ, ಸುಳ್ಳುಗಳನ್ನು ಪ್ರತಿನಿದಿಸುತ್ತಿದ್ದಾರೆ. ಅವರ ಈ ಭಾವನೆಯ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ. ಬಿಜೆಪಿ ಬಿತ್ತಿರುವ ದ್ವೇಷ ಮತ್ತು ಅಸಹಿಷ್ಣುತೆಯನ್ನು ಕಾಂಗ್ರೆಸ್ ಪಕ್ಷ ಪ್ರೀತಿಯಿಂದ ತಿರುಗೇಟು ನೀಡಲಿದೆ ಎಂದು ರಾಹುಲ್ ಹೇಳಿದರು.
ವಯನಾಡ್ ನಾಗರಿಕರಿಗೆ ಕಾಂಗ್ರೆಸ್ ಬಾಗಿಲು ಸದಾ ತೆರೆದಿರುತ್ತದೆ
ಇದೇ ವೇಳೆ ವಯನಾಡಿನ ಪ್ರತಿಯೊಬ್ಬ ನಾಗರಿಕರಿಗೆ ಕಾಂಗ್ರೆಸ್‌ನ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಎಲ್ಲರೂ ತಮ್ಮ, ವಯಸ್ಸು, ಯಾವ ಸ್ಥಳದಿಂದ ಬರುತ್ತೀರಿ ಎಂಬುದು ಮುಖ್ಯವಾಗದೆ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಪಕ್ಷದಲ್ಲಿ ಅವಕಾಶವಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಇತ್ತೀಚೆಗೆ ಮುಕ್ತಾವಾದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ವಕ್ಷೇತ್ರ ಅಮೇಥಿಯಲ್ಲದೇ ವಯನಾಡ್ ನಿಂದಲೂ ಸ್ಪರ್ಧಿಸಿದ್ದರು. ಅಂತೆಯೇ ಅಮೇಥಿಯಲ್ಲಿ ಸೂತರೂ ವಯನಾಡ್ ನಲ್ಲಿ 4.3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com