ಡಬಲ್ ಡೆಕ್ಕರ್ ಬಸ್ -ಟ್ರಕ್​ ಮುಖಾಮುಖಿ ಡಿಕ್ಕಿ : 11 ಮಂದಿ ಸ್ಥಳದಲ್ಲೇ ದುರ್ಮರಣ

ವೇಗವಾಗಿ ಬರುತ್ತಿದ್ದ ಡಬ್ಬಲ್​ಡೆಕ್ಕರ್​ಬಸ್​ನ ಬ್ರೇಕ್​ಫೇಲ್​ಆಗಿ ಎದುರಿಗೆ ಬರುತ್ತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 11 ಮಂದಿ ಸಾವಿಗೀಡಾಗಿ, 25 ಮಂದಿ .,..

Published: 10th June 2019 12:00 PM  |   Last Updated: 10th June 2019 02:24 AM   |  A+A-


Bus Rams Into Truck

ಅಪಘಾತಕ್ಕೀಡಾದ ಬಸ್

Posted By : SD SD
Source : Online Desk
ನವದೆಹಲಿ: ವೇಗವಾಗಿ ಬರುತ್ತಿದ್ದ ಡಬ್ಬಲ್​ಡೆಕ್ಕರ್​ಬಸ್​ನ ಬ್ರೇಕ್​ಫೇಲ್​ಆಗಿ ಎದುರಿಗೆ ಬರುತ್ತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 11 ಮಂದಿ ಸಾವಿಗೀಡಾಗಿ, 25 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್​ನ ಹಜಾರಿಬಾಘ್​ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬಸ್​ ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಬಳಿಕ ಬ್ರೇಕ್​ ಫೇಲ್​ ಆಗಿರುವುದು ನಮ್ಮ ಗಮನಕ್ಕೆ ಬಂತು. ವೇಗವಾಗಿ ಚಲಿಸುತ್ತಿದ್ದ ಬಸ್ ಅನ್ನು ನಿಯಂತ್ರಣಕ್ಕೆ ತರಲು ಚಾಲಕ ಪ್ರಯತ್ನಿಸುತ್ತಿದ್ದ. ಆದರೆ, ಬಸ್​ ಎದುರು ಬರುತ್ತಿದ್ದ ಟ್ರಕ್​ಗೆ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಬಸ್​ನ ಕೆಳಮಟ್ಟದ ಡೆಕ್​ಸಂಪೂರ್ಣವಾಗಿ ಹಾನಿಯಾಗಿತ್ತು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದ್ದಾರೆ. 

ಬಸ್​ಬ್ರೇಕ್ ಫೇಲ್ ಆಗಿದೆ ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ಬಸ್​ಚಾಲಕ ಕೂಗಾಡುವುದನ್ನು ಕೇಳಿದೆ. ಚಾಲಕ ಮತ್ತು ನಿರ್ವಾಹಕ ಇಬ್ಬರು ಪ್ರಯಾಣಿಕರನ್ನು ಉಳಿಸಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಏಕೆಂದರೆ ವೇಗವಾಗಿ ಹೋಗುತ್ತಿದ್ದ ಬಸ್​ನಿಲ್ಲಿಸಲು ಯಾವುದೇ ಅವಕಾಶ ಇರಲಿಲ್ಲ ಎಂದು ಮತ್ತೊಬ್ಬ ಗಾಯಗೊಂಡ ಪ್ರಯಾಣಿಕ ಹೇಳಿದ್ದಾರೆ.

ಗಾಯಗೊಂಡಿರುವ ಪ್ರಯಾಣಿಕರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಂಚಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತಕ್ಕೀಡಾದ ಬಸ್ ಜಾರ್ಖಂಡ್​ನ ರಾಂಚಿಯಿಂದ ಪಟನಾ ಜಿಲ್ಲೆಯ​ಮಸೌರಿ ಪ್ರದೇಶಕ್ಕೆ ಹೋಗುತ್ತಿತ್ತು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp