ಕಥುವಾ ಅತ್ಯಾಚಾರ, ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ, 3 ಪೊಲೀಸರಿಗೆ 5 ವರ್ಷ ಜೈಲು

ಜಮ್ಮು ಮತ್ತು ಕಾಶ್ಮೀರ ಸೇರಿ ದೇಶಾದ್ಯಂತ ಸುದ್ದಿಯಾಗಿದ್ದ ಕಥುವಾ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರು ಅಪರಾಧಿಗಳ ಪೈಕಿ ಮೂವರಿಗೆ...
ಸಾಂಜಿ ರಾಮ್
ಸಾಂಜಿ ರಾಮ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಸೇರಿ ದೇಶಾದ್ಯಂತ ಸುದ್ದಿಯಾಗಿದ್ದ ಕಥುವಾ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರು ಅಪರಾಧಿಗಳ ಪೈಕಿ ಮೂವರಿಗೆ ಜೀವಾವಧಿ  ಶಿಕ್ಷೆ ಹಾಗೂ ಮೂವರ ಪೊಲೀಸರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಪಠಾಣ್ ಕೋಟ್ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
ಇಂದು ಬೆಳಗ್ಗೆಯಷ್ಟೇ ಪ್ರಮುಖ ಆರೋಪಿಗಳಾದ ಪರ್ವೀಶ್, ದೀಪಕ್ ಖಜುರಿಯಾ ಹಾಗೂ ಸಾಂಜಿ ರಾಮ್ ಮತ್ತು ಎರಡು ವಿಶೇಷ ಪೊಲೀಸ್ ಅಧಿಕಾರಿಗಳಾದ ದೀಪಕ್ ಖಜಾರಿಯಾ ಮತ್ತು ಸುರೇಂದರ್ ವರ್ಮಾ  ಹಾಗೂ ಹೆಡ್ ಕಾನ್ಸ್ಟೇಬಲ್ ತಿಲಕ್ ರಾಜ್ ಅವರನ್ನು ಪಠಾಣ್ ಕೋಟ್ ನ್ಯಾಯಾಲಯ ದೋಷಿಗಳೆಂದು ಘೋಷಿಸಿತ್ತು. ಆದರೆ ಶಿಕ್ಷೆಯ ಪ್ರಮಾಣ ಕಾಯ್ದಿರಿಸಿತ್ತು.
ಇಂದು ಸಂಜೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಕೋರ್ಟ್, ಪ್ರಮುಖ ಮೂವರು ಅಪರಾಧಿಗಳಾದ ಪರ್ವೀಶ್, ದೀಪಕ್ ಖಜುರಿಯಾ ಹಾಗೂ ಸಾಂಜಿ ರಾಮ್ ಗೆ ತಲಾ 25 ವರ್ಷ ಜೈಲು ಶಿಕ್ಷೆ ಹಾಗೂ ಸಾಕ್ಷ್ಯ ನಾಶಪಡಿಸಿದ ಪೊಲೀಸ್ ಅಧಿಕಾರಿಗಳಾದ ಆನಂದ್ ದತ್, ತಿಲಕ್ ರಾಜ್ ಮತ್ತು ಸುರೇಂದ್ರ ವರ್ಮಾ ಅವರಿಗೆ ತಲಾ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಲೆಮಾರಿ ಮುಸ್ಲಿಂ ಜನಾಂಗಕ್ಕೆ ಸೇರಿದ್ದ ಎಂಟು ವರ್ಷ ವಯಸ್ಸಿನ ಬಾಲಕಿಯನ್ನು ಕಳೆದ ವರ್ಷ ಜನವರಿ 10 ರಂದು ಅಪಹರಿಸಿ, ಅತ್ಯಾಚಾರ ನಡೆಸಿ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಗಿತ್ತು.
ಏಪ್ರಿಲ್ 2018ರಲ್ಲಿ ಏಳು ಆರೋಪಿಗಳನ್ನು ಬಂಧಿಸಿ ವಿಚಾರಣೆ ಪ್ರಾರಂಭಿಸಲಾಗಿತ್ತು. ಈ ವಿಚಾರಣೆ ಕಳೆದ ಜೂನ್ ಜೂನ್ 3 ರಂದು ಕೊನೆಗೊಂಡು ಸೋಮವಾರ ತೀರ್ಪು ಪ್ರಕಟವಾಗಿದೆ.
ಕೃತ್ಯದಲ್ಲಿ ಬಾಗಿಯಾಗಿದ್ದ ಇನ್ನೋರ್ವ ಅಪರಾಧಿ ವಯಸ್ಸು ಇನ್ನೂ ಖಚಿತವಾಗಿಲ್ಲ. ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಅವನ ವಯಸ್ಸಿನ ಕುರಿತಂತೆ ಅರ್ಜಿ ವಿಚಾರಣೆ ನಡೆಸುತ್ತಿರುವ ಕಾರಣ ಬಾಲಾಪರಾಧಿಯ ವಿಚಾರಣೆ ಇನ್ನೂ ಪ್ರಾರಂಭವಾಗಿರುವುದಿಲ್ಲ.
ಅಪರಾಧ ದಳದ ಪೋಲೀಸರು ಐವರು ಆರೊಪಿಗಳನ್ನು ಬಂಧಿಸಿದ್ದರು. ಸಾಂಜಿ ರಾಮ್ ನಿಂದ ಅಕ್ರಮವಾಗಿ  4 ಲಕ್ಷ ರೂ.ಪಡೆದು ನಿರ್ಣಾಯಕ ಸಾಕ್ಷಿಗಳನ್ನು ನಾಶಪಡಿಸಿದ್ದ ಸಬ್ ಇನ್ಸ್ಪೆಕ್ಟರ್ ಆನಂದ್ ದತ್ತಾ ಹಾಗೂ ಹೆಡ್ ಕಾನ್ಸ್ಟೇಬಲ್ ತಿಲಕ್ ರಾಜ್  ಅವರನ್ನೂ ಅಪರಾಧ ದಳದ ಅಧಿಕಾರಿಗಳು ಬಂಧಿಸಿದ್ದರು. ಅಪ್ರಾಪ್ತ ಬಾಲಕ ಹೊರತಾಗಿ ಉಳಿದ ಆರೋಪಿಗಳೆಲ್ಲರೂ ಪ್ರಸ್ತುತ ಪಂಜಾಬ್ ನ ಗುರುದಾಸ್ಪುರ್ ಜೈಲಿನಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com