'ವಾಯು' ಚಂಡಮಾರುತ: ಗುಜರಾತ್ ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ

ಅತ್ತ ಕೇರಳ ಕರಾವಳಿ ತೀರಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ಇತ್ತ ಗುಜರಾತ್ ಕರಾವಳಿ ತೀರದಲ್ಲಿ 'ವಾಯು' ಚಂಡಮಾರುತ ಭೀತಿ ಆರಂಭವಾಗಿದೆ.
ವಾಯು ಚಂಡಮಾರುತ
ವಾಯು ಚಂಡಮಾರುತ
ಅಹ್ಮದಾಬಾದ್: ಅತ್ತ ಕೇರಳ ಕರಾವಳಿ ತೀರಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ಇತ್ತ ಗುಜರಾತ್ ಕರಾವಳಿ ತೀರದಲ್ಲಿ 'ವಾಯು' ಚಂಡಮಾರುತ ಭೀತಿ ಆರಂಭವಾಗಿದೆ.
ಇದೇ ಗುರುವಾರದ ಹೊತ್ತಿಗೆ ಗುಜರಾತ್ ಕರಾವಳಿ ತೀರಕ್ಕೆ ವಾಯು ಚಂಡಮಾರುತ ಅಪ್ಪಳಿಸಲಿದ್ದು, ಚಂಡಮಾರುತವನ್ನು ಎದುರಿಸಲು ಗುಜರಾತ್ ಸರ್ಕಾರ ಸಿದ್ಧತೆ ನಡೆಸಿದೆ. ಈಗಾಗಲೇ ಕರಾವಳಿ ತೀರದ ಜನರನ್ನು ಸ್ಥಳಾಂತರಿಸುವ ಕೆಲಸ ಭರದಿಂದ ಸಾಗಿದ್ದು, ತಗ್ಗು ಪ್ರದೇಶಗಳಲ್ಲಿನ ಜನರನ್ನು ಕೂಡ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ವಾಯುಚಂಡಮಾರುತ ಹಿನ್ನಲೆಯಲ್ಲಿ ಗುಜರಾತ್ ನ ಕಚ್ ನಿಂದ ದಕ್ಷಿಣ ಗುಜರಾತ್ ವರೆಗಿನಗ ಎಲ್ಲ ಕರಾವಳಿತೀರ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಇನ್ನು ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಗುರುವಾರ ವಾಯು ಚಂಡಮಾರುತ ಗುಜರಾತ್ ನ ವೆರವಲ್ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ ಎನ್ನಲಾಗಿದೆ. ಅಂತೆಯೇ ಕರಾವಳಿ ತೀರ ಹತ್ತಿರಾವಾಗುತ್ತಿದ್ದಂತೆಯೇ ವಾಯು ಚಂಡಮಾರುತದ ವೇಗ 17 ಕಿ.ಮೀ ಹೆಚ್ಚಾಗಿದ್ದು ಕರಾವಳಿ ತೀರಕ್ಕೆ ಆಗಮಿಸುವಷ್ಟರ ಹೊತ್ತಿಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಚ್ಚರಿಕೆ ನೀಡಿದೆ. ಗುರುವಾರ ಬೆಳಗ್ಗೆ ವಾಯು ಚಂಡಮಾರುತ 135ರಿಂದ 140 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಎಂದು ಹೇಳಲಾಗಿದೆ.
ಪ್ರಸ್ತುತ ವಾಯು ಚಂಡಮಾರುತ ಅರೇಬಿಯನ್ ಸಮುದ್ರದಲ್ಲಿ ಬೀಸುತ್ತಿದ್ದು, ಗೋವಾದಿಂದ ಸುಮಾರು 350 ಕಿ.ಮೀ ದೂರದಲ್ಲಿ, ಮುಂಬೈ ಕರಾವಳಿ ತೀರದಿಂದ 410 ಕಿ.ಮೀ, ಗುಜರಾತ್ ನ ವೆರವಲ್ ಕರಾವಳಿ ತೀರದಿಂದ 530 ಕಿ.ಮೀ ದೂರದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಾಯು ಚಂಡಮಾರುತದಿಂದಾಗಿ ಗುಜರಾತ್ ಕಚ್, ಜಾಮ್ ನಗರ್, ಜುನಾಘಡ್, ದೇವ್ ಭೂಮಿ, ಪೋರ್ ಬಂದರ್, ರಾಜ್ ಕೋಟ್, ಅಮ್ರೇಲಿ, ಭಾವ್ ನಗರ್ ಮತ್ತು ಗಿರ್, ಸೋಮನಾಥ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. 
ಗುಜರಾತ್ ಸಿಎಂ ವಿಜಯ್ ರೂಪಾನಿ ಚಂಡಮಾರುತ ಹಿನ್ನಲೆಯಲ್ಲಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಕರಾವಳಿ ತೀರದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪ್ರಮುಖವಾಗಿ ಪೋರ್ ಬಂದರ್, ಮಹುವಾ, ವೆರವಲ್ಸ ಡ್ತು ಪ್ರಾಂತ್ಯದಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇಲ್ಲಿ ಜನರ ಸ್ಥಳಾಂತರ ಕಾರ್ಯಕ್ಕೆ ವೇಗ ನೀಡಲಾಗಿದೆ. ಅಂತೆಯೇ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com