6 ತಿಂಗಳಲ್ಲಿ ಬರೊಬ್ಬರಿ 12 ವಿಮಾನಗಳನ್ನು ಕಳೆದುಕೊಂಡ ಐಎಎಫ್

ಭಾರತೀಯ ವಾಯುಪಡೆ (ಐಎಎಎಫ್) ಕಳೆದ 6 ತಿಂಗಳುಗಳಲ್ಲಿ 12 ವಿಮಾನಗಳನ್ನು ಕಳೆದುಕೊಂಡಿದೆ.

Published: 12th June 2019 12:00 PM  |   Last Updated: 12th June 2019 01:00 AM   |  A+A-


Indian Air Force lost 12 aircraft in less than 6 months this year

6 ತಿಂಗಳಲ್ಲಿ ಬರೊಬ್ಬರಿ 12 ವಿಮಾನಗಳನ್ನು ಕಳೆದುಕೊಂಡ ಐಎಎಫ್

Posted By : SBV SBV
Source : IANS
ನವದೆಹಲಿ: ಭಾರತೀಯ ವಾಯುಪಡೆ (ಐಎಎಎಫ್) ಕಳೆದ 6 ತಿಂಗಳುಗಳಲ್ಲಿ 12 ವಿಮಾನಗಳನ್ನು ಕಳೆದುಕೊಂಡಿದೆ. 

ಈಗಾಗಲೇ ಸ್ಕ್ವಾಡ್ರನ್ ಸಂಖ್ಯಾಬಲದಲ್ಲಿ ಕೊರತೆ ಎದುರಿಸುತ್ತಿರುವ ಐಎಎಫ್ ಗೆ ಇದು ಮತ್ತೊಂದು ಸಮಸ್ಯೆಯಾಗಿದೆ.  ಸಾಗಣೆ ವಿಮಾನ ಆಂಟೋನಿಯೋ ಎಎನ್-32 ಇತ್ತೀಚೆಗೆ ಪತನಗೊಂಡಿದ್ದು, ಈ ವರ್ಷ ಫೈಟರ್ ಹಾಗೂ ಬಾಂಬರ್ ವಿಮಾನಗಳಾದ ಮಿಗ್-27, ಮಿಗ್-21, ಜಾಗ್ವಾರ್ ಹಾಗೂ ಮಿರಾಜ್-2000 ಗಳೂ ಪತನಗೊಂಡಿವೆ. 

ಫೆಬ್ರವರಿ ತಿಂಗಳಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಇದ್ದ ಮಿಗ್-21 ವಿಮಾನ ಪಾಕ್ ವಿಮಾನವನ್ನು  ಹೊಡೆದುರುಳಿಸಿದಾಗ ಪತನಗೊಂಡಿತ್ತು. 

ಇದಕ್ಕೂ ಮುನ್ನ ಜ.28 ರಂದು ಜಾಗ್ವಾರ್ ಉತ್ತರ ಪ್ರದೇಶದ ಕುಶೀನಗರ್ ನಲ್ಲಿ ಪತನಗೊಂಡಿತ್ತು. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp