ಕರುಳು ಹಿಂಡುತ್ತೆ: ತಾಯಿಯ ಪುನರ್‌ವಿವಾಹಕ್ಕೆ ಶುಭ ಕೋರಿದ ಪುತ್ರ; ಫೇಸ್‍ಬುಕ್‍ ಪೋಸ್ಟ್ ವೈರಲ್!

ದೇಶದಲ್ಲಿ ಪುನರ್‌ವಿವಾಹ ಕುರಿತಂತೆ ತುಚ್ಛ ಭಾವ, ಅಸಹ್ಯ, ಸಂದೇಹದಿಂದ ನೋಡಲಾಗುತ್ತದೆ. ಆದರೆ ಇಲ್ಲೊಬ್ಬ ಮಗ ತನ್ನ ತಾಯಿ ಪುನರ್‌ವಿವಾಹವಾಗಿದ್ದಕ್ಕೆ ಶುಭಾಶಯ ಕೋರಿ ಫೇಸ್‍ಬುಕ್‍ನಲ್ಲಿ ಪೋಸ್ಟ್...

Published: 12th June 2019 12:00 PM  |   Last Updated: 12th June 2019 09:50 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಕೊಲ್ಲಂ: ದೇಶದಲ್ಲಿ ಪುನರ್‌ವಿವಾಹ ಕುರಿತಂತೆ ತುಚ್ಛ ಭಾವ, ಅಸಹ್ಯ, ಸಂದೇಹದಿಂದ ನೋಡಲಾಗುತ್ತದೆ. ಆದರೆ ಇಲ್ಲೊಬ್ಬ ಮಗ ತನ್ನ ತಾಯಿ ಪುನರ್‌ವಿವಾಹವಾಗಿದ್ದಕ್ಕೆ ಶುಭಾಶಯ ಕೋರಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದು ಈ ಪೋಸ್ಟ್ ಇದೀಗ ವೈರಲ್ ಆಗಿದೆ.

ಕೇರಳದ ಕೊಲ್ಲಂ ಜಿಲ್ಲೆಯ 23 ವರ್ಷದ ಗೋಕುಲ್ ಶ್ರೀಧರ್ ಎಂಬಾತ ಅಮ್ಮನ ಪುನರ್‌ವಿವಾಹಕ್ಕೆ ಶುಭಾಶಯ ಕೋರಿದ್ದು ಅದರ ಕೆಳಗೆ ತನ್ನ ಅಮ್ಮನ ತ್ಯಾಗದ ಬಗ್ಗೆ ನೆನೆದು ಬರೆದುಕೊಂಡಿದ್ದಾರೆ. 

ಗೋಕುಲ್ ಫೇಸ್‍ಬುಕ್‍ ಪೋಸ್ಟ್ ಬರಹದಲ್ಲಿ ಏನಿದೆ?
ನನ್ನನ್ನು ಹೆತ್ತು, ನನಗಾಗಿ ಜೀವನ ಸಾಗಿಸಿ, ನನ್ನ ಯಶಸ್ಸಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ನನ್ನ ತಾಯಿಗೆ ಏನೆಂದು ಹೇಳಲಿ. ಅವಳು ಮೊದಲ ಮದುವೆಯಿಂದ ಸಾಕಷ್ಟು ನೋವುಂಡಿದ್ದಳು. ಗಂಡನಿಂದ ಒಡೆಸಿಕೊಂಡು ತಲೆಯಿಂದ ರಕ್ತ ಸೋರುತ್ತಿದ್ದಾಗ ನಾನು ಆಕೆಯನ್ನು ಕೇಳಿದ್ದೆ. ಯಾಕೆ ಇದನೆಲ್ಲಾ ಯಾಕೆ ಸಹಿಸಿಕೊಳ್ಳುತ್ತಿದ್ದೀಯಾ? ಅದಕ್ಕೆ ಅಮ್ಮ ನಿನಗಾಗಿ ನಾನು ಬದುಕುತ್ತಿದ್ದೇನೆ. ನಾನು ಇದನ್ನು ಸಹಿಸಿಕೊಳ್ಳುತ್ತಿರುವುದು ಎಂದು ಹೇಳಿದ್ದಳು.

ನನ್ನ ತಾಯಿ ಗಂಡನನ್ನು ಬಿಟ್ಟು ಹೊರಬಂದಾಂಗ ನನಗೆ 10ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ತಾಯಿ ಶಿಕ್ಷಕಿಯಾಗಿದ್ದರು. ಈಗ ಅಮ್ಮ ಕೆಲಸ ಬಿಟ್ಟಿದ್ದಾರೆ. ಇನ್ನು ನಾನು ಕೆಲಸದ ನೆಪದಲ್ಲಿ ದೂರ ಹೋದರೆ ಅಮ್ಮ ಒಬ್ಬಂಟಿಯಾಗುತ್ತಾಳೆ. ಹಾಗಾಗಿ ನಾನು ಪುನರ್‌ವಿವಾಹದ ಬಗ್ಗೆ ತಾಯಿಗೆ ಹೇಳುತ್ತಿದ್ದೆ. ಅಮ್ಮ ಬೇಡ ಅನ್ನುತ್ತಿದ್ದಳು. ಆಕೆಯ ಸಹೋದ್ಯೋಗಿಗಳ ಕಡೆಯಿಂದಲೇ ಈ ವಿವಾಹ ಸಂಬಂಧ ಬಂದಿತ್ತು. ಆಕೆ ಮೊದಲು ಬೇಡ ಎಂದು ನಿರಾಕರಿಸಿದ್ದರೂ ನಂತರ ಒಪ್ಪಿಕೊಂಡಳು ಎಂದಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp