ಲೋಕಸಭೆ ಉಪನಾಯಕನಾಗಿ ರಾಜನಾಥ್ ಆಯ್ಕೆ, ನಂ.2 ಸ್ಥಾನಕ್ಕೇರಲು ಅಮಿತ್ ಶಾಗೆ ತಪ್ಪಿದ ಅವಕಾಶ

ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕನಾದರೆ ರಕ್ಷಣಾ ಸಚಿವ ....
ರಾಜನಾಥ್ ಸಿಂಗ್ ಹಾಗೂ ಪಿಎಂ ಮೋದಿ
ರಾಜನಾಥ್ ಸಿಂಗ್ ಹಾಗೂ ಪಿಎಂ ಮೋದಿ
ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕನಾದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪ ನಾಯಕರಾಗಿ ನೇಮಕಗೊಂಡಿದ್ದಾರೆ.
ಕೇಂದ್ರ ಸಚಿವ ತವಾರ್ ಚಂದ್ ಗೆಹ್ಲೋಟ್ ರಾಜ್ಯಸಭೆಯಲ್ಲಿ ನಾಯಕರಾಗಿದ್ದರೆ ರೈಲ್ವೆ ಸಚಿವ ಪಿಯೂಷ್ ಗೋಯಲ್  ಉಪನಾಯಕರಾಗಿ ನೇಮಕ ವಾಗಿದ್ದಾರೆ.ಸಂಸದೀಯ ವ್ಯವಹಾರಗಳ ಸಚಿವ ಪ್ರಹಾದ್ ಜೋಶಿ ಅವರನ್ನುಸರ್ಕಾರದ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ.
ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಯ ಮುಖ್ಯ ಸಚೇತಕರಾದರೆ ವಿದೇಶಾಂಗ ವ್ಯವಹಾರಗಳ ಕಾತೆ ರಾಜ್ಯ ಸಚ್ವಿವ ವಿ. ಮುರಳಿಧರನ್  ರಾಜ್ಯಸಭೆ ಮುಖ್ಯ ಸಚೇತಕರಾಗಿದ್ದಾರೆ.
ಈ ಎಲ್ಲ ನಾಯಕರು 50-ಸದಸ್ಯರ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿಯ ಭಾಗವಾಗಿರುತ್ತಾರೆ ಬಾಲಸುಬ್ರಮಣ್ಯಂ ಕಾಮರ್ಸು  ಸಂಸದೀಯ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರಿಗೆ ಪಕ್ಷದ ಕಛೇರಿಯಲ್ಲಿ ಸಂಸದೀಯ ಉಸ್ತುವಾರಿಯನ್ನಾಗಿ ಮಾಡಲಾಗಿದೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರವಿಶಂಕರ್ ಪ್ರಸಾದ್, ಅರ್ಜುನ್ ಮುಂಡಾ, ನರೇಂದ್ರ ಸಿಂಗ್ ತೋಮರ್, ಸ್ಮೃತಿ ಇರಾನಿ ಮತ್ತು ಪಕ್ಷದ ಹಿರಿಯ  ಸಂಸದ ಜುವಾಲ್ ಒರಾಮ್ ಲೋಕಸಭೆಯಿಂದ ವಿಶೇಷ ಆಹ್ವಾನಿತರಾಗಿದ್ದಾರೆ.
ಕೇಂದ್ರ ಸಚಿವರಾದ ಜೆ.ಪಿ. ನಡ್ಡ, ನಿರ್ಮಲಾ ತಾರಾಮನ್, ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವಡೇಕರ್ ಮತ್ತು ಹಿರಿಯ ಸಂಸದ ಓಂ ಪ್ರಕಾಶ್ ಮಾಥುರ್ ಅವರು ರಾಜ್ಯಸಭೆ ವಿಶೇಷ ಆಹ್ವಾನಿತರೆನಿಸಿದ್ದಾರೆ. ಲೋಕಸಭೆಯಲ್ಲಿ 18 ಮಹಿಳಾ ಸಂಸತ್ ಸದಸ್ಯರನ್ನು ಮತ್ತು ರಾಜ್ಯಸಭೆಯಲ್ಲಿ ಆರು ಮಹಿಳಾ ಸದಸ್ಯರನ್ನು ಒಳಗೊಂಡಂತೆ ಪಕ್ಷ ರಾಜ್ಯದ ಶೋಬಾ ಕರಂದ್ಲಾಜೆ ಸೇರಿದಂತೆ  18 ಮುಖ್ಯ ಸಚೇತಕರನ್ನು ನೇಮಕ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com