ಜೈಶಂಕರ್ ಜೊತೆ ಕೆಲಸ ಮಾಡಿದ್ದ ಸನ್ ವೈಡಾಂಗ್‌ ಈಗ ಭಾರತಕ್ಕೆ ಚೀನಾದ ರಾಯಭಾರಿ

ಹಾಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಜೊತೆ ಕೆಲಸ ಮಾಡಿದ್ದ ದಕ್ಷಿಣ ಏಷ್ಯಾದ ತಜ್ಞ ಸನ್ ವೈಡಾಂಗ್ ಈಗ ಭಾರತಕ್ಕೆ ಚೀನಾದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

Published: 12th June 2019 12:00 PM  |   Last Updated: 12th June 2019 07:51 AM   |  A+A-


Sun Weidong appointed China's new envoy to India

ಜೈಶಂಕರ್ ಜೊತೆ ಕೆಲಸ ಮಾಡಿದ್ದ ಸನ್ ವೈಡಾಂಗ್‌ ಈಗ ಭಾರತಕ್ಕೆ ಚೀನಾದ ರಾಯಭಾರಿ

Posted By : SBV SBV
Source : PTI
ನವದೆಹಲಿ: ಹಾಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಜೊತೆ ಕೆಲಸ ಮಾಡಿದ್ದ ದಕ್ಷಿಣ ಏಷ್ಯಾದ ತಜ್ಞ ಸನ್ ವೈಡಾಂಗ್ ಈಗ ಭಾರತಕ್ಕೆ ಚೀನಾದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. 

ಎಸ್ ಜೈಶಂಕರ್  2009- 2013 ಅವಧಿಯಲ್ಲಿ ಚೀನಾಗೆ ಭಾರತೀಯ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಚೀನಾದ ಡೆಪ್ಯುಟಿ ಡೈರೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸನ್ ವೈಡಾಂಗ್ ಜೈಶಂಕರ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ.  

ಪಾಕಿಸ್ತಾನಕ್ಕೆ ಚೀನಾ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಸನ್ ವೈಡಾಂಗ್ ಪ್ರಸ್ತುತ ಚೀನಾ ವಿದೇಶಾಂಗ ಇಲಾಖೆಯ ನೀತಿ ಹಾಗೂ ಯೋಜನಾ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. 

ಲುವೋ ಝಾಹೋಯಿ, ಭಾರತಕ್ಕೆ ಚೀನಾದ ರಾಯಭಾರಿಯಾಗಿ ಈ ವರೆಗೂ ಕಾರ್ಯನಿರ್ವಹಿಸುತ್ತಿದ್ದರು. ಈಗ ಅವರನ್ನು ಚೀನಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವರನ್ನಾಗಿ ನೇಮಕ ಮಾಡಲಾಗಿದೆ. 

ಚೀನಾದಲ್ಲಿರುವ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ವೈಡಾಂಗ್ ನೇಮಕಕ್ಕೆ  ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp