ವಾಯು ಚಂಡಮಾರುತ ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಸೇವೆ ವ್ಯತ್ಯಯ

ವಾಯು ಚಂಡಮಾರುತದ ಪರಿಣಾಮವಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಗುಜರಾತ್ ನ 5 ವಿಮಾನ ನಿಲ್ದಾಣಗಳಲ್ಲಿ ಸೇವೆ ವ್ಯತ್ಯಯವಾಗಲಿದೆ ಎಂದು ಹೇಳಿದೆ.

Published: 12th June 2019 12:00 PM  |   Last Updated: 12th June 2019 11:44 AM   |  A+A-


Vayu: Airports, railways cancel services

ವಾಯು ಚಂಡಮಾರುತ ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಸೇವೆ ವ್ಯತ್ಯಯ

Posted By : SBV SBV
Source : Online Desk
ನವದೆಹಲಿ: ವಾಯು ಚಂಡಮಾರುತದ ಪರಿಣಾಮವಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಗುಜರಾತ್ ನ 5 ವಿಮಾನ ನಿಲ್ದಾಣಗಳಲ್ಲಿ ಸೇವೆ ವ್ಯತ್ಯಯವಾಗಲಿದೆ ಎಂದು ಹೇಳಿದೆ. 

ಮುಂದಿನ 24 ಗಂಟೆಗಳಲ್ಲಿ ಗುಜರಾತ್ ನ 5 ವಿಮಾನ ನಿಲ್ದಾಣಗಳು ಸ್ಥಗಿತಗೊಳ್ಳಲಿದ್ದು, ವಿಮಾನ ನಿಲ್ದಾಣದ ಮೂಲಸೌಕರ್ಯಗಳಿಗೆ ಚಂಡಮಾರುತದಿಂದ ಉಂಟಾಗುವ ನಷ್ಟವನ್ನು ಹಾಗೂ ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲವನ್ನು ತಡೆಗಟ್ಟಲು ಸೇವೆಗಳನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರ ಹೇಳಿದೆ. 

ಇದೇ ವೇಳೆ ಗುಜರಾತ್ ನಲ್ಲಿ ಸೌರಾಷ್ಟ್ರ ಹಾಗೂ ಕಚ್ ಪ್ರದೇಶದಿಂದ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಇದೇ ವೇಳೆ ರೈಲು ಸೇವೆಗಳಲ್ಲಿಯೂ ವ್ಯತ್ಯಯ ಉಂಟಾಗಲಿದೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp