ವಾಯು ಚಂಡಮಾರುತ ಅಬ್ಬರ: ಗರ್ಭೀಣಿ ಮಹಿಳೆ ರಕ್ಷಿಸಿದ ಎನ್ ಡಿಆರ್ ಎಫ್

ವಾಯು ಚಂಡಮಾರುತದ ಅಬ್ಬರ ಗುಜರಾತಿನ ಸಿಯಾಲ್ ಬೆಟ್ ದ್ವೀಪ ಪ್ರದೇಶದತ್ತ ಮುಖಮಾಡಿದ್ದು, ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡ ಗರ್ಭೀಣಿ ಮಹಿಳೆಯರೊಬ್ಬರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸುವ ಮೂಲಕ ತಾಯಿ ಹಾಗೂ ಮಗುವಿನ ಪ್ರಾಣ ಕಾಪಾಡಿದ್ದಾರೆ.
ಗರ್ಭೀಣಿ ಮಹಿಳೆ ಹಾಗೂ ಎನ್ ಡಿಆರ್ ಎಫ್ ತಂಡ
ಗರ್ಭೀಣಿ ಮಹಿಳೆ ಹಾಗೂ ಎನ್ ಡಿಆರ್ ಎಫ್ ತಂಡ
ಗುಜರಾತ್ : ಗುಜರಾತಿನ ಸಿಯಾಲ್ ಬೆಟ್ ದ್ವೀಪ ಪ್ರದೇಶದಲ್ಲಿ ವಾಯು ಚಂಡಮಾರುತದ ಅಬ್ಬರ ಮುಂದುವರೆದಿದ್ದು, ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡ ಗರ್ಭೀಣಿ ಮಹಿಳೆಯರೊಬ್ಬರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸುವ ಮೂಲಕ  ತಾಯಿ ಹಾಗೂ ಮಗುವಿನ ಪ್ರಾಣ ಕಾಪಾಡಿದ್ದಾರೆ. 
ಸಿಯಾಲ್ ಬೆಟ್  ಗುಜರಾತಿನ ಕರಾವಳಿ ತೀರ ಪ್ರದೇಶಲ್ಲಿರುವ ಸಣ್ಣ ದ್ವೀಪ ಪ್ರದೇಶವಾಗಿದೆ.  ಈ ದ್ವೀಪ ಪ್ರದೇಶದಲ್ಲಿ  ವಾಸವಿದ್ದ ಮಹಿಳೆಯನ್ನು ರಾಷ್ಟ್ರೀಯ  ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡದ 5 ಬೆಟಲಿಯನ್ ತಂಡ  ರಕ್ಷಿಸಿದೆ.  
ದೋಣಿಯ ಮೂಲಕ ಜಾಪರಾಬಾದ್ ನಗರದಲ್ಲಿನ ಆಸ್ಪತ್ರೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ. ನಂತರ ಆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಎನ್ ಡಿಆರ್ ಎಫ್ ತಂಡ ಸ್ಪಷ್ಪಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com