ಪಾಕ್ ಮೂಲದ ಉಗ್ರನನ್ನು ಐದು ದಿನ ಎನ್ ಐಎ ವಶಕ್ಕೆ ಒಪ್ಪಿಸಿದ ನ್ಯಾಯಾಲಯ

ಪಾಕಿಸ್ತಾನ ಮೂಲದ ನಿಷೇಧಿತ ಉಗ್ರ ಸಂಘಟನೆ ಫಲಾಹ್-ಇ-ಇನ್ಸಾನಿಯಟ್ ಫೌಂಡೇಶನ್ ಸದಸ್ಯ ಮೊಹಮ್ಮದ್ ಅರಿಫ್ ಗುಲಾಂ ಬಷೀರ್ ಧರಂಪುರಿಯಾ ನನ್ನು ಐದು ದಿನಗಳ ಕಾಲ ಎನ್ ಐಎ ವಶಕ್ಕೆ ದೆಹಲಿಯ ನ್ಯಾಯಾಲಯವೊಂದು ಒಪ್ಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪಾಕಿಸ್ತಾನ ಮೂಲದ ನಿಷೇಧಿತ ಉಗ್ರ ಸಂಘಟನೆ ಫಲಾಹ್-ಇ-ಇನ್ಸಾನಿಯಟ್ ಫೌಂಡೇಶನ್ ಸದಸ್ಯ ಮೊಹಮ್ಮದ್ ಅರಿಫ್ ಗುಲಾಂ ಬಷೀರ್  ಧರಂಪುರಿಯಾ ನನ್ನು ಐದು ದಿನಗಳ ಕಾಲ ಎನ್ ಐಎ ವಶಕ್ಕೆ ದೆಹಲಿಯ ನ್ಯಾಯಾಲಯವೊಂದು ಒಪ್ಪಿಸಿದೆ. 
 ಉಗ್ರ ಚಟುವಟಿಕೆಗೆ ಹಣಕಾಸು ಪೂರೈಕೆ ಆರೋಪದ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪನ್ನು ಪ್ರಕಟಿಸಿದೆ. ಈ ಪ್ರಕರಣದಲ್ಲಿ  ಹಲವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿಲ್ ಅಂಟಿಲ್ ಧರಂಪುರಿಯಾನನ್ನು ಎನ್ ಐಎ ವಶಕ್ಕೆ ನೀಡಿದ್ದು, ವಿಚಾರಣೆಗೆ ಅವಕಾಶ ಮಾಡಿಕೊಡಿದ್ದಾರೆ.
ಭಾರತದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ನಿಟ್ಟಿನಲ್ಲಿ ಹವಾಲಾ ಹಣ ಪೂರೈಕೆದಾರರಿಂದ  ಉಗ್ರ ಚಟುವಟಿಕೆಗಳಿಗೆ ಹಣ ಪಡೆದ ಆರೋಪದ ಮೇರೆಗೆ ಧರಂಪುರಿಯಾನನ್ನು ಬಂಧಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com